ಬೆಂಗಳೂರು: ಇದು ಅಂತಿಂಥಾ ಆಫರ್ ಅಲ್ಲವೇ ಅಲ್ಲಾ…ಮೆಗಾ ಆಪರ್, ಬಂಪರ್ ಕೊಡುಗೆ.. ಮಿಸ್ ಮಾಡಿದರೆ ಮತ್ತೆಂದೂ ಸಿಗದ ಅವಕಾಶ. ಅರೆ ಇದೇನಪ್ಪಾ. ಸದ್ಯಕ್ಕೆ ಯಾವ ಹಬ್ಬ ಇಲ್ವಲ್ಲ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.
ಅಮೆರಿಕದ ಸುಂಕ ಸಮರ ಭಾರತದ ಪಾಲಿಗೆ ವರವಾಗುವ ಸಾಧ್ಯತೆಗಳಿವೆ. ಅದರಲ್ಲೂ ಎಲೆಕ್ಟ್ರಾನಿಕ್ ಉಪಕಗಳು ಹಾಫ್ ರೇಟ್, ಚೀಪ್ ರೇಟ್ ಗೆ ಸಿಗಬಹುದು.
ಚೀನಾದಲ್ಲಿ ರಾಶಿ ಬಿದ್ದಿದೆ ದಾಸ್ತಾನು!
ಚೀನಾದ ವಿರುದ್ಧ ಸುಂಕ ಸಮರ ಸಾರಿರುವ ಅಮೆರಿಕಾ ಅಲ್ಲಿನ ಉದ್ಯಮ ಜಗತ್ತನ್ನೇ ಬುಡಮೇಲು ಮಾಡಿದೆ. ವಿಶ್ವದ ನೂರಾರು ಕಂಪನಿಗಳು ಚೀನಾದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಹೊಂದಿವೆ. ಎಲ್ ಜಿ, ಸೋನಿ, ಸ್ಯಾಮ್ ಸಂಗ್, ಆಪಲ್ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ಅಪಾರ ಪ್ರಮಾಣದ ದಾಸ್ತಾನು ಚೀನಾದಲ್ಲಿದೆ. ಅಮೆರಿಕಕ್ಕಂತೂ ಸದ್ಯದ ತೆರಿಗೆ ಬರೆಯಲ್ಲಿ ರಫ್ಟು ಮಾಡೋದು ಅಸಾಧ್ಯ. ಹಾಗಂತಾ ಸಿದ್ಧವಾಗಿರುವ ಸರಕನ್ನು ಹಾಗೆ ಬಿಟ್ಟರೆ ಅಪಾರ ಬಂಡವಾಳಕ್ಕೆ ಭವಿಷ್ಯವಿಲ್ಲದಂತಾಗುತ್ತೆ.
ಅಗ್ಗದ ಬೆಲೆಗೆ ಸಿಗುತ್ತಾ ಟಿವಿ, ಫ್ರಿಡ್ಜ್!
ಹಾಗೆ ನೋಡಿದರೆ, ಚೀನಾದಲ್ಲಿ ಸಿದ್ಧವಾಗಿರುವ ಟಿವಿ, ಪ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಫೋನ್ ಗಳ ಅಪಾರ ದಾಸ್ತಾನಿದೆ. ಇದನ್ನು ವಿಲೇವಾರಿ ಮಾಡುವುದೇ ದೊಡ್ಡ ದೊಡ್ಡ ಕಂಪನಿಗಳಿಗೆ ತಲೆ ಬಿಸಿ ತಂದಿದೆ. ಹೀಗಾಗಿಯೇ ಆ ಸರಕನ್ನು ಭಾರತದಲ್ಲಿ ವಹಿವಾಟು ಮಾಡಿ ಕೈ ತೊಳೆದುಕೊಳ್ಳಲು ಕಂಪನಿಗಳು ಪ್ಲ್ಯಾನ್ ಮಾಡುತ್ತಿವೆ. ಈಗಾಗಲೇ ಭಾರತದೊಟ್ಟಿಗೆ ಪ್ರಮುಖ ಕಂಪನಿಗಳು ಚರ್ಚೆ ಶುರುಮಾಡಿವೆ. ಆಮದು ಸುಂಕ ಇತ್ಯರ್ಥವಾದರೆ ಅಪಾರ ಪ್ರಮಾಣದಲ್ಲಿ ಭಾರತಕ್ಕೆ ಚೀನಾದಿಂದ ಸರಕು ಹರಿದು ಬರಲಿದೆ. ಹೀಗಾದಲ್ಲಿ ದುಬಾರಿ ಬೆಲೆಯ ಸರಕು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಕೈಸೇರಬಹುದಾಗಿದೆ. ಹಾಗಾದಲ್ಲಿ ಯಾವ ಹಬ್ಬ, ಹರಿದಿನಗಳಿಲ್ಲದಿದ್ದರೂ ಮೇ ಅಂತ್ಯದ ಹೊತ್ತಿಗೆ ಬೇಸಿಗೆ ಬಂಪರ್ ಖುಲಾಯಿಸುವ ಸಾಧ್ಯತೆಗಳಿವೆ.