ಬೆಂಗಳೂರು: ಐಪಿಎಲ್ ಚುಟುಕು ಕ್ರಿಕೆಟ್ ಟೂರ್ನಿಯು ದಿನೇದಿನೆ ರಂಗೇರುತ್ತಿದೆ. ಜಿಯೋ ಹಾಟ್ ಸ್ಟಾರ್ ಕೂಡ ಮೊಬೈಲ್ ನಲ್ಲೇ ಉಚಿತವಾಗಿ ಕ್ರಿಕೆಟ್ ಲೈವ್ ವೀಕ್ಷಣೆ ಮಾಡುವ ಅವಕಾಶ ನೀಡಿದೆ. ಈಗ ಕ್ರಿಕೆಟ್ ಪ್ರಿಯರಿಗೆಂದೇ ಬಿಎಸ್ಸೆನ್ನೆಲ್ ಕೂಡ ಹೊಸ ಪ್ಲಾನ್ ಆರಂಭಿಸಿದೆ. ಕೇವಲ 1,198 ರೂಪಾಯಿ ರಿಚಾರ್ಜ್ (BSNL Rs 1,198 Plan) ಮಾಡಿಕೊಂಡರೆ ಸಾಕು, ವರ್ಷವಿಡೀ ಪ್ರತಿ ದಿನ 3 ಜಿಬಿ ಡೇಟಾ ದೊರೆಯಲಿದೆ.
ಬಿಎಸ್ಸೆನ್ನೆಲ್ ವಾರ್ಷಿಕ ಯೋಜನೆಯಲ್ಲಿ ನೀವು ಪೂರ್ತಿ 1 ವರ್ಷದ ವ್ಯಾಲಿಡಿಟಿ ಪಡೆಯುತ್ತೀರಿ. ಅತ್ಯಂತ ಅಗ್ಗದ ಬೆಲೆ ಒಂದು ವರ್ಷದ ವ್ಯಾಲಿಡಿಟಿ ನೀಡುತ್ತಿರುವುದು ಈ ಯೋಜನೆಯ ವಿಶೇಷತೆ. 1,198 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ ಮಾಸಿಕ 300 ಉಚಿತ ವಾಯ್ಸ್ ಕಾಲ್ ಗಳನ್ನು ಮಾಡಬಹುದಾಗಿದೆ. ಹಾಗೆಯೇ, ತಿಂಗಳಿಗೆ 30 ಮೆಸೇಜ್ ಗಳನ್ನು ಕೂಡ ಉಚಿತವಾಗಿ ಕಳುಹಿಸಬಹುದಾಗಿದೆ.
17 ವರ್ಷದ ಬಳಿಕ ಬಿಎಸ್ಸೆನ್ನೆಲ್ ಗೆ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಕಂಪನಿಯು 17 ವರ್ಷದ ಬಳಿಕ ಲಾಭ ಗಳಿಸಿದೆ. 2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 262 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜೂನ್ ತ್ರೈಮಾಸಿಕದಲ್ಲಿ ಬಿಎಸ್ಸೆನ್ನೆಲ್ ಬಳಕೆದಾರರ ಸಂಖ್ಯೆ 8.4 ಕೋಟಿ ಇತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ 9 ಕೋಟಿಗೆ ಮುಟ್ಟಿದೆ. ಮೊಬಿಲಿಟಿ ಸೇವೆ, ಎಫ್ ಟಿಟಿಎಚ್ (ಫೈಬರ್ ಟು ದಿ ಹೋಮ್) ಮತ್ತು ಲೀಸ್ಡ್ ಲೈನ್ ಸರ್ವಿಸ್ ವಿಭಾಗದಲ್ಲಿ ಶೇ.14ರಿಂದ ಶೇ. 18ರಷ್ಟು ಬೆಳವಣಿಗೆಯಾಗಿದೆ. ದೇಶಾದ್ಯಂತ 4ಜಿ ಸೇವೆ ಒದಗಿಸುತ್ತಿರುವ ಕಂಪನಿ ಈಗ 5 ಜಿ ಸೇವೆಗಳನ್ನು ನೀಡಲು ಮುಂದಾಗಿದೆ.