ಚಿಕ್ಕಬಳ್ಳಾಪುರ : ಪತ್ನಿ ಸಮಾಧಿ ಹುಡುಕಿಕೊಂಡು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಬೆಟ್ಟ ಬಂದ ಬ್ರಿಟಿಷ್ ವ್ಯಕ್ತಿ.
ಪತ್ನಿ ಸೋಫಿಯಾ ಗ್ಯಾರೆಟ್ ಸಮಾಧಿ ಹುಡುಕಿಕೊಂಡು ಬಂದ ಪ್ರಖ್ಯಾತ ಸಾಹಿತಿ ಜಾನ್ ಗ್ಯಾರೆಟ್ ನಂದಿಗಿರಿಧಾಮದ ತಪ್ಪಲಿನ ಸುಲ್ತಾನ್ ಪೇಟೆ ಬಳಿ ಇರುವ ಸಮಾಧಿಯನ್ನು ಎರಡು ಬಾರೀ ಹುಡುಕಾಡಿದರೂ ಸಿಗದೆ, ಮೂರನೇ ಬಾರೀ ಪ್ರವಾಸಿ ಮಿತ್ರ ಗೈಡ್ ಮೂಲಕ ಪತ್ನಿ ಸಮಾಧಿಯನ್ನು ಪತ್ತೆ ಮಾಡಿದ್ದಾರೆ.
ಮೈಸೂರು ಸಂಸ್ಥಾನದ ಶಿಕ್ಷಣ ಇಲಾಕೆಯ ಉನ್ನತ ಹುದ್ದೆ ಹಾಗೂ ಸಾಹಿತಿಯಾಗಿದ್ದ ಜಾನ್ ಗ್ಯಾರೆಟ್ 60 ವರ್ಷ ಬಳಿಕ ಪತ್ನಿ ಸಮಾಧಿಯನ್ನು ಕಂಡು ಕಣ್ಣೀರಿಟ್ಟಿದ್ದಾರೆ.
ಜಾನ್ ಗ್ಯಾರೆಟ್ ಲಂಡನ್ ನಿಂದ ಗುಜರಾತ್ ಗೆ ಆಗಮಿಸಿ ನಂತರ ನಂದಿಗೆ ಭೇಟಿ ಕೊಟ್ಟಿದ್ದಾರೆ.