ಬೆಂಗಳೂರು: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಭಾರತೀಯ ಪಶುಪಾಲನಾ ನಿಗಮದಲ್ಲಿ ಖಾಲಿ ಇರುವ 12,981 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೇ 11 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸಿಎ, ಸಿಎಸ್, ಎಂಎಸ್ಸಿ, ಎಂಇ, ಎಂಟೆಕ್, ಎಂಬಿಎ, ಪಿಜಿಡಿಎಂ, ಎಂವಿಎಸ್ಸಿ ಕೋರ್ಸ್ ಗಳನ್ನು ಮುಗಿಸಿದವರಿಗೆ ಒಳ್ಳೆಯ ಅವಕಾಶವಿದೆ.
ಯಾವ ಹುದ್ದೆಗಳು ಎಷ್ಟು ಖಾಲಿ?
ಮುಖ್ಯ ಪ್ರಾಜೆಕ್ಟ್ ಅಧಿಕಾರಿ- 44
ಜಿಲ್ಲಾ ವಿಸ್ತರಣಾಧಿಕಾರಿ- 440
ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ- 2,121
ಪಂಚಾಯತ್ ಪಶು ಸೇವಕ್- 10,376
ಸಂಬಳ ಎಷ್ಟು?
ಮುಖ್ಯ ಪ್ರಾಜೆಕ್ಟ್ ಅಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 75 ಸಾವಿರ ರೂ. ಸಂಬಳ ದೊರೆಯಲಿದೆ. ಇನ್ನು ಜಿಲ್ಲಾ ವಿಸ್ತರಣಾಧಿಕಾರಿಗೆ 50 ಸಾವಿರ ರೂ., ತೆಹ್ಸೀಲ್ ಅಭಿವೃದ್ಧಿ ಅಧಿಕಾರಿಗೆ 40 ಸಾವಿರ ರೂ. ಹಾಗೂ ಪಂಚಾಯತ್ ಪಶು ಸೇವಕ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 28,500 ರೂ. ಸಂಬಳ ದೊರೆಯುತ್ತದೆ.
ನೇಮಕಾತಿ ಹೇಗೆ?
ಅರ್ಜಿ ಸಲ್ಲಿಸಿದವರಿಗೆ ಒಟ್ಟು 50 ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಅಬ್ಜೆಕ್ಟಿವ್ ಟೈಪ್ ಪರೀಕ್ಷೆ ಇದಾಗಿರುತ್ತದೆ. https://pay.bharatiyapashupalan.com/onlinerequirment ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.