ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್ ಗಳು ಈಗ ಮತ್ತೆ ಆಕ್ಟೀವ್ ಆಗಿವೆ. ಒಂದು ವಾರದಲ್ಲೇ ದೇವನಹಳ್ಳಿಯ ಕೆಂಪೇಗೌಡ ಏರ್ಫೋಟ್‌ಗೆ ಎರಡು ಬಾರಿ ಹುಸಿ ಬಾಂಬ್ ಬೆದರಿಕೆ ಕರೆ ಬಂದಿವೆ. ಉಗ್ರ ಅಜ್ಮಲ್ ಕಸಬ್ ಗೆ ಗಲ್ಲು ಹಾಕಿದ್ದು ಸರಿಯಿಲ್ಲ ಎಂದು ಉಗ್ರನ ಹೆಸರಿನಲ್ಲಿ ಏರ್ಪೋಟ್ ಭದ್ರತಾ ಪಡೆಯ ಮೇಲ್‌ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.
ಈ ತಿಂಗಳ 13 ಮತ್ತು 16 ರಂದು ಕಿಡಿಗೇಡಿಗಳು ಎರಡು ಬಾರಿ ಬಾಂಬ್ ಬೆದರಿಕೆ ಸಂದೇಶವನ್ನು ಮೇಲ್ ಮಾಡಿದ್ದಾರೆ. ಪಜಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲಾನ್ ಎ ಫೆಲ್ ಆದ್ರೆ ಪ್ಲಾನ್ ಬಿ ಎಂದು ಬೆದರಿಕೆ ಹಾಕಲಾಗಿದೆ. ಅಲ್ಲದೆ ಏರ್ಪೋಟ್ ನ ಶೌಚಾಲಯದ ಪೈಪ್ ಲೈನ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಬೆದರಿಕೆ ಮೇಲ್ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್ಪೋಟ್ ಪೊಲೀಸರು ಐಡಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಎಲ್ಲೆಡೆ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಇದು ಹುಸಿ ಬಾಂಬ್ ಮೇಲ್ ಎಂದು ಅಧಿಕಾರಿಗಳಿಗೆ ತಿಳಿದು ಬಂದಿದೆ. ಇನ್ನು ಈ ಹುಸಿಬಾಂಬ್ ಬೆದರಿಕೆ ಕರೆಗಳಿಂದ ಏರ್ಪೋಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದ್ದು, ಕಿಡಿಗೇಡಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.