ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ (ಬಿ.ಎ೦.ಆರ್.ಸಿ.ಎಲ್) 150 ಮೆಂಟೇನರ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಪರೇಷನ್ ಮತ್ತು ನಿರ್ವಹಣೆ ವಲಯದಲ್ಲಿ 150 ಮೆಂಟೇನರ್ ಗಳ ಹುದ್ದೆಗಳು ಖಾಲಿ ಇವೆ. ಐಟಿಐ ಪಾಸಾದವರು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಮಾಜಿ ಸೈನಿಕ ಅಭ್ಯರ್ಥಿಗಳು ಎರಡು ವರ್ಷದ ಐಟಿಐ ಶಿಕ್ಷಣವನ್ನು – ಟೆಕ್ನಿಕಲ್ ಟ್ರೇಡ್ ಗಳಾದ ಎಲೆಕ್ಟ್ರಿಶಿಯನ್, ಇನ್ ಸ್ಟ್ರುಮೆಂಟೇಷನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೈಯರ್ ಮೆನ್, ಫಿಟ್ಟರ್, ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ ವೇರ್, ಮೆಕ್ಯಾನಿಕ್ -ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಇಲೆಕ್ಟ್ರಾನಿಕ್ ಸಿಸ್ಟಮ್ ಮೇಂಟೆನನ್ಸ್, ಮೆಕ್ಯಾನಿಕಲ್ ಕಮ್ಯುನಿಕೇಷನ್ ಸಾಧನಗಳ ನಿರ್ವಹಣೆ, ಮೆಕ್ಯಾನಿಕ್ ಮೆಕಾಟ್ರಾನಿಕ್ಸ್ ಅಥವಾ ಎನ್ ಸಿವಿಟಿ / ಎನ್ ಸಿಟಿವಿಟಿ / ಎನ್ ಎಸಿ ಪ್ರಮಾಣಪತ್ರಗಳಿಗೆ ತತ್ಸಮಾನ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಬಹುದು.
ವೇತನ ಎಷ್ಟು?
ಮೆಂಟೇನರ್ ಹುದ್ದೆಗಳಿಗೆ ಆಯ್ಕೆಯಾದವರಿಗೆ 25 ಸಾವಿರ ರೂಪಾಯಿಯಿಂದ 59,060 ರೂಪಾಯಿ ಮಾಸಿಕ ವೇತನ ಇದೆ. ಪ್ರತಿ ವರ್ಷ ಶೇ.3ರಷ್ಟು ವೇತನ ಹೆಚ್ಚಳ ಮಾಡಲಾಗುತ್ತದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಕೆಳಗಿನಂತೆ ತಿಳಿದು, ಅರ್ಜಿ ಸಲ್ಲಿಸಿ. ಮೊದಲಿಗೆ 5 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆ ಆಧರಿಸಿ ಸೇವೆ ಅವಧಿ ಅಗತ್ಯವಿದ್ದಲ್ಲಿ ಮಾತ್ರ ವಿಸ್ತರಣೆ ಮಾಡಲಾಗುತ್ತದೆ.
ಮೇ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆನ್ ಲೈನ್ ಮೂಲಕ http://www.bmrc.co.in/ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 50 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.