ದಾವಣಗೆರೆ: 55ರ ಅತ್ತೆ ಜೊತೆ 25ರ ಅಳಿಯ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಾ ಪ್ರತ್ಯಕ್ಷರಾಗಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ, ಯುವಕ ಗಣೇಶ್ ಎಲ್ಲಿದ್ದಾನೆ ಅನ್ನೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿಲ್ಲ. ಮುದ್ದೇನಹಳ್ಳಿಗೆ ಶಾಂತಾ ಬಂದು ವಾಸಿಸುತ್ತಿರುವ ಮಾಹಿತಿ ಸಿಕ್ಕಿದೆ. ಶಾಂತಾ ವಾಪಸ್ ಬಂದಿರುವ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಶಾಂತಾ, ನಾನು ಯಾರ ಜೊತೆ ಓಡಿ ಹೋಗಿಲ್ಲ. ತವರು ಮನೆಯಲ್ಲಿ ವಾಸವಿದ್ದೆ ಅಂತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ಗಣೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.