ಬೀದರ್ ನ ಸಿವಿಲ್ ಜಡ್ಜ್ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪಾದ್ರಿ ಗ್ಯಾಂಗ್ ನ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಉದ್ಗೀರ್ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಧ್ಯಪ್ರದೇಶದ ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕರಣ್, ಧನರಾಜ್, ನಿಗಮ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 1.77 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ, 10 ಗ್ರಾಂ ಚಿನ್ನದ ಚೈನ್, 2 ಚಿನ್ನದ ಬಳೆ, 20 ಗ್ರಾಂ ಬೆಳ್ಳಿ ಚೈನ್, 30 ಗ್ರಾಂ ಬೆಳ್ಳಿ ಉಂಗುರ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಜಡ್ಜ್ ಮನೆಗೆ ಮಾರ್ಚ್ 31ರಂದು ತಡರಾತ್ರಿ ಬೀಗ ಮುರಿದು ಒಳನುಗ್ಗಿದ್ದ ಖದೀಮರು ಕಳ್ಳತನ ಮಾಡಿದ್ದರು.
ಜೆಎಂಎಫ್ಸಿ ನ್ಯಾಯಾಲಯದ ಜಡ್ಜ್ ಎಂ.ಡಿ.ಶೈಜ್ ಚೌಟಾಯಿ ಎಂಬುವವರ ಮನೆ ಕಳ್ಳತನ ಮಾಡಿದ್ದರು. ಈ ಪ್ರಕರಣದ ತನಿಖೆಗೆ 3 ತಂಡಗಳನ್ನು ಎಸ್ಪಿ ಪ್ರದೀಪ್ ಗುಂಟಿ ರಚಿಸಿದ್ದರು. ನ್ಯೂಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಜಯ್ಕುಮಾರ್ ನೇತೃತ್ವದಲ್ಲಿ ಪ್ರಕರಣ ಬೇಧಿಸಲಾಗಿತ್ತು. ಆರೋಪಿಗಳು ಮೂರ್ನಾಲ್ಕು ದಿನ ಜಡ್ಜ್ ಮನೆಯ ಸುತ್ತಲೂ ಓಡಾಡಿ, ಆನಂತರ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.