ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಸಂಸ್ಥೆಯಲ್ಲಿ 20 ಹುದ್ದೆಗಳು ಖಾಲಿ (BHEL Recruitment 2025) ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ (Job News In Kannada) ನೀಡಲಾಗಿದ್ದು, ಜೂನ್ 11 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. https://careers.bhel.in/index.jsp ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ನೇಮಕಾತಿ ಸಂಸ್ಥೆ: ಬಿಎಚ್ಇಎಲ್
ಕೆಲಸದ ಸ್ಥಳ: ಹೈ ಪ್ರೆಶರ್ ಬಾಯ್ಲರ್ ಪ್ಲಾಂಟ್, ತಿರುಚಿರಪಳ್ಳಿ
ಹುದ್ದೆಗಳ ಹೆಸರು: ಎಫ್ ಟಿ ಎ ಜಿಆರ್-2 (ಎಂಜಿನಿಯರ್-ಕ್ವಾಲಿಟಿ)- 10 ಹುದ್ದೆ ಖಾಲಿ
ಎಫ್ ಟಿ ಎ ಜಿಆರ್-3 (ಸೂಪರ್ ವೈಸರ್-ಕ್ವಾಲಿಟಿ)- 10 ಹುದ್ದೆ ಖಾಲಿ
ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿ ಹಲವು ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 22 ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ ಸಮುದಾಯವರಿಗೆ ಮೂರು ವರ್ಷ ಹಾಗೂ ಜನರಲ್, ಒಬಿಸಿಯವರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಕ್ವಾಲಿಟಿ ವಿಭಾಗದ ಎಂಜಿನಿಯರ್ ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 84 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಇನ್ನು ಕ್ವಾಲಿಟಿ ವಿಭಾಗದ ಸೂಪರ್ ವೈಸರ್ ಹುದ್ದೆಗಳಿಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 45 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಇದರ ಜತೆಗೆ ವಿಮಾ ಸೌಕರ್ಯಗಳೂ ಲಭ್ಯವಾಗಲಿವೆ.