ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆಯ ‘ಭೈರತಿ ರಣಗಲ್’ ಚಿತ್ರ ಮೊದಲ ದಿನ ಭರ್ಜರಿಯಾಗಿ ಗಳಿಕೆ ಮಾಡಿದೆ ಎನ್ನಲಾಗಿದೆ.
ಕೇವಲ ಕನ್ನಡದಲ್ಲಿ ಮಾತ್ರ ಈ ಚಿತ್ರ ಬಿಡುಗಡೆಯಾಗಿದ್ದು, ಸುಮಾರು 2 ರಿಂದ 5 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಕೇವಲ ಕನ್ನಡದಲ್ಲಿ ಮಾತ್ರ ಈ ಚಿತ್ರ ಬಿಡುಗಡೆಯಾಗಿದ್ದರಿಂದಾಗಿ ಈ ಕಲೆಕ್ಷನ್ ನ್ನು ಉತ್ತಮ ಎಂದೇ ಹೇಳಬಹುದು. ಇದಕ್ಕೆ ರೇಟಿಂಗ್ ಕೂಡ ಇತ್ತಮವಾಗೇ ಸಿಕ್ಕಿದ್ದು, 9.6 ರೇಟಿಂಗ್ ಬಂದಿದೆ. ಬರೋಬ್ಬರಿ 2 ಸಾವಿರ ಜನ ರೇಟಿಂಗ್ ನೀಡಿದ್ದಾರೆ. ಹೀಗಾಗಿ ಚಿತ್ರ ಮತ್ತಷ್ಟು ಸಾಧನೆ ಮಾಡುವ ನಿರೀಕ್ಷೆ ಮೂಡಿಸಿದೆ.
ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿ ಈ ‘ಭೈರತಿ ರಣಗಲ್’ ಸಿನಿಮಾ ಸಿದ್ಧವಾಗಿದೆ. ‘ಮಫ್ತಿ’ ಹಿಟ್ ಆದ ಬಳಿಕ ಅದರ ಮುಂದುವರೆದ ಭಾಗವಾಗಿ ಭೈರತಿ ರಣಗಲ್ ಚಿತ್ರದ ಕಥೆಯನ್ನು ನಿರ್ದೇಶಕ ಕಟ್ಟಿದ್ದಾರೆ. ಇದು ಕೂಡ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಪುಷ್ಪ 2 ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಅಲ್ಲಿಯವರೆಗೆ ಉತ್ತಮ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಹೀಗಾಗಿ ಭೈರತಿ ರಣಗಲ್ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.