ಬೆಂಗಳೂರು : ಜಿಬಿಎ ಸಿಬ್ಬಂದಿಗೆ ಮತ್ತೆ ನಾಯಿಗಳ ಕಾಟ ಎದುರಾಗಿದೆ. ಸಮೀಕ್ಷೆಗೆ ತೆರಳಿದ ವೇಳೆ ಗಣತಿದಾರರಿಗೆ ಸಾಕು ನಾಯಿ ಕಚ್ಚಿದೆ.
ಈ ಘಟನೆ ಇಂದು ಬೆಳಗ್ಗೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ. ಗಣತಿದಾರ ನಾಗರಾಜ್ನ ಎಡಭುಜಕ್ಕೆ ಬಲವಾಗಿ ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಗಣತಿಗೆ ತೆರಳಿದ ಶಿಕ್ಷಕಿ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿದ್ದು,ಆಕೆಯ ರಕ್ಷಿಸಲು ಮುಂದಾಗಿದ್ದ ಅವರ ಪತಿ ಸೇರಿದಂತೆ ಇನ್ನು 7 ಜನರ ಮೇಲೆ ನಾಯಿಗಳು ದಾಳಿ ಮಾಡಿ ಗಂಬೀರ ಗಾಯಗಳು ಮಾಡಿದ್ದವು ಇದೀಗ ಬೆಂಗಳೂರಿನಲ್ಲಿ ಶ್ವಾನ ದಾಳಿಯ ಘಟನೆ ಕಂಡುಬಂದಿವೆ.