ಬೆಂಗಳೂರು: ಬಿಬಿಎಂಪಿ ಕಂದಾಯ ಇಲಾಖೆ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ.
ಬಿಬಿಎಂಪಿ ಕಂದಾಯ ಇಲಾಖೆ ಒಂದೇ ತಿಂಗಳಲ್ಲಿ ದಾಖಲೆ ಪ್ರಮಾಣದ ಅಸ್ತಿ ತೆರಿಗೆ ವಸೂಲಿ ಮಾಡುವುದರ ಮೂಲಕ ಇತಿಹಾಸ ಬರೆದಿದೆ. 2025-26ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ಗರಿಷ್ಠ ಮಟ್ಟದಲ್ಲಿ ವಸೂಲಿ ಮಾಡಿದೆ.
ಏ. 1ರಿಂದ 30ರೊಳಗೆ ಒಂದೇ ತಿಂಗಳಲ್ಲಿ ಬಿಬಿಎಂಪಿಯು 1,417 ಕೋಟಿ ರೂ. ವಸೂಲಿ ಮಾಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕೇವಲ 670 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ ತೆರಿಗೆ ಕಟ್ಟಲು ಶೇ. 5ರಷ್ಟು ರಿಯಾಯಿತಿ ನೀಡಲಾಗಿತ್ತು. ಹೀಗಾಗಿ ದಾಖಲೆ ಪ್ರಮಾಣದಲ್ಲಿ ಆಸ್ತಿ ತೆರಿಗೆ ವಸೂಲಿಯಾಗಿದೆ.
ನಗರದಲ್ಲಿ 22 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಅದರಲ್ಲಿ 8 ಲಕ್ಷ ಆಸ್ತಿ ಮಾಲೀಕರು ಏಪ್ರಿಲ್ ತಿಂಗಳಲ್ಲೇ ತೆರಿಗೆ ಪಾವತಿ ಮಾಡಿದ್ದಾರೆ. ಬಿಬಿಎಂಪಿಯು ವಾರ್ಷಿಕ 6 ಸಾವಿರ ಕೋಟಿ ರೂ. ತೆರಿಗೆ ವಸೂಲಿ ಗುರಿ ಹೊಂದಿದೆ. ಆದರೆ, ಈ ಬಾರಿ ಒಂದೇ ತಿಂಗಳಲ್ಲಿ ಶೇ. 25ರಷ್ಟು ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಕರ್ನಾಟಕ ನ್ಯೂಸ್ ಬೀಟ್ ಗೆ ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಅಯುಕ್ತರು ಮಾಹಿತಿ ನೀಡಿದ್ದಾರೆ.
ಯಾವ ವಲಯಗಳಲ್ಲಿ ಎಷ್ಟು ಅಸ್ತಿ ತೆರಿಗೆ ಸಂಗ್ರಹ?
ಬೊಮ್ಮನಹಳ್ಳಿ 158.99 73.16
ದಾಸರಹಳ್ಳಿ 45.03 18.75
ಪೂರ್ವ 285.24 132.53
ಮಹದೇವಪುರ 272.44 160.64
ಆರ್ಆರ್ನಗರ 105.65 44.9
ದಕ್ಷಿಣ 254.74 117.13
ಪಶ್ಚಿಮ 177.56 76.31
ಯಲಹಂಕ 118.31 46.96
ಒಟ್ಟು 1417.95 670.38