ಬೆಂಗಳೂರು: ಜುಲೈ ಒಂದರಿಂದ ಬಿಬಿಎಂಪಿ ಕಟ್ಟಡ ಪ್ಲಾನ್ ಪಡೆಯಲು ಇ ಖಾತ ಕಡ್ಡಾಯ ಮಾಡಲಾಗಿದೆ.
ಇ.ಖಾತ ಇದ್ದರೆ ಮಾತ್ರ ಇನ್ನು ಮುಂದೆ ಕಟ್ಟಡಕ್ಕೆ ಪ್ಲಾನ್ ಸಿಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹೊಸ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿರುವ ಬಹುತೇಕ ಖಾಲಿ ನಿವೇಶನಗಳಿಗೆ ಈಗಾಗಲೇ ಇ ಖಾತ ನೀಡಲಾಗಿದೆ. ಇ ಖಾತ ಇಲ್ಲ ಅಂದ್ರೆ ಪ್ಲಾನ್ ಸ್ಯಾಂಕ್ಷನ್ ಮಾಡಲಾಗುವುದಿಲ್ಲ. ಪ್ಲ್ಯಾನ್ ಇದ್ದರೆ ಇ ಖಾತ ಸಲ್ಲಿಸುವುದು ಕಡ್ಡಾಯವಾಗಿದೆ. ಅನ್ ಲೈನ್ ಮುಖಾಂತರ ನಕ್ಷೆ ಮಂಜೂರಾತಿಗೆ ಇ ಖಾತ ಬೇಕೇ ಬೇಕು. ಇ ಖಾತ ಇಲ್ಲವಾದರೆ, ನಿಮ್ಮ ನಿವೇಶನ ಕಟ್ಟಡಕ್ಕೆ ಪ್ಲಾನ್ ಕೊಡುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ.