ಬೆಂಗಳೂರು: ಲೋಕಾಯುಕ್ತ ಪೊಲೀಸರ ಬಲೆಗೆ ಬಿಬಿಎಂಪಿ ಎಇಇ ಬಿದ್ದಿರುವ ಘಟನೆ ನಡೆದಿದೆ.
50 ಸಾವಿರ ರೂ. ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ. ಬೇಗೂರು ಸಬ್ ಡಿವಿಷನ್ ಎಇಇ ನೀಲಕಂಠಯ್ಯ, ಗುತ್ತಿಗೆದಾರರ ರಕ್ಷಿತ್ ಯಾದವ್ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾಮಗಾರಿಗೆ ಒಪ್ಪಿಗೆ ನೀಡಲು ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚಕ್ಕೆ ಡಿಮ್ಯಾಂಡ್ ಇಟ್ಟ ಹಿನ್ನಲೆ ಲೋಕಾಯುಕ್ತಕ್ಕೆ ವ್ಯಕ್ತಿ ದೂರು ನೀಡಿದ್ದರು. ದೂರು ಪಡೆದು ಇಂದು ಲಂಚ ಪಡೆಯುವ ವೇಳೆ ಹೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.