ವಿಜಯಪುರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ, ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ದಲಿತ ಸಂಘಟನೆ, ಮುಸ್ಲಿಂ ಸಂಘಟನೆಗಳಿಂದ ಇಂದು ಬಂದ್ ಗೆ ಕರೆ ನೀಡಿವೆ.
ಬೆಳಿಗ್ಗೆ 11 ಗಂಟೆಗೆ ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಬಂದ್ ಹಿನ್ನೆಲೆಯಲ್ಲಿ ವಿಜಯಪುರ ನಗರ ವ್ಯಾಪ್ತಿಯಲ್ಲಿ ನಗರ ಸಾರಿಗೆ, ಆಟೋ ಸಂಚಾರ, ತರಕಾರಿ ಮಾರಾಟ, ಅಂಗಡಿ–ಮಳಿಗೆಗಳು, ಎಪಿಎಂಸಿ ಮಾರುಕಟ್ಟೆ ಬಹುತೇಕ ಬಾಗಿಲು ತೆರೆಯುವುದಿಲ್ಲ. ಬೆಳಿಗ್ಗೆ ಹೂವು, ಹಾಲು, ದಿನಪತ್ರಿಕೆ ಮಾರಾಟಕ್ಕೆ ಅವಕಾಶ ಇರಲಿದೆ. ಆಸ್ಪತ್ರೆ, ಔಷಧ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಬಂದ್‌ಗೆ ಕರೆ ನೀಡಿರುವ ಸಂಘಟಕರು ತಿಳಿಸಿದ್ದಾರೆ.