ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಸವಿತಾ ಸಮಾಜ ಸಂಘದಿಂದ ಬಂದ್ ಕರೆ ನೀಡಲಾಗಿತ್ತು.
ಮುಖಂಡರು ಬಲವಂತವಾಗಿ ಸಲೂನ್ ಶಾಪ್, ಬಾರ್ಬರ್ ಶಾಪ್, ಬ್ಯೂಟಿ ಪಾರ್ಲರ್ ಗಳಿಗೆ ಬೀಗ ಹಾಕಿಸಲಾಯಿತು.
ಬೇರೆ ಕಡೆಯಿಂದ ಬಂದು ಬಾರ್ಬರ್ ಶಾಪ್ ಗಳನ್ನು ನಡೆಸುತ್ತಿರುವ ವಿಚಾರವಾಗಿ ಸ್ಥಳೀಯ ಸವಿತಾ ಸಮಾಜದ ಸಮುದಾಯಕ್ಕೆ ವ್ಯಾಪಾರ ಕಡಿಮೆಯಾಗಿತ್ತಿದೆ. ಈ ಹಿನ್ನೆಲೆ. ಬೇರೆ ಕಡೆಯಿಂದ ಬಂದವರನ್ನು ಖಾಲಿ ಮಾಡಿಸುವಂತೆ ಆಗ್ರಹಿಸಿ ಬಂದ್ ಮಾಡಲಾಗಿತ್ತು.
ಈ ನಡುವೆ ಅಂಗಡಿಗಳನ್ನು ಬಂದ್ ಮಾಡಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಹಾಗೂ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡು, ಶಾಲಾ ವಾಹನಗಳು ಸೇರಿದಂತೆ ವಾಹನ ಸವಾರರ ಪರದಾಡುವಂತಾಗಿದೆ.