ಇತ್ತೀಚಿನ ದಿನಗಳಲ್ಲಿ ಜನರು ಸಿನಿಮಾ ಸೀರಿಯಲ್ ಗಳಿಗಿಂತ ವೆಬ್ ಸೀರೀಸ್ ಗಳ ಕಡೆ ಗಮನ ಹರಿಸುತ್ತಿದ್ದಾರೆ.
ಅದರಲ್ಲೂ ಕನ್ನಡದಲ್ಲಿ ಯಾವುದೇ ಚೆನ್ನಾಗಿರುವ ವೆಬ್ ಸೀರೀಸ್ ಬರುತ್ತಿಲ್ಲ ಎನ್ನುವುದು ಹಲವರ ವಾದ ಆಗಿತ್ತು. ಆದರೆ, ಇದೀಗ ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ವೆಬ್ ಸರಣಿ ‘ಅಯ್ಯನ ಮನೆ’ ಆ ಕೊರಗನ್ನು ನೀಗಿಸಿದೆ. ‘ಅಯ್ಯನ ಮನೆ’ ವೆಬ್ ಸರಣಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಂದ ವೀಕ್ಷಣೆ ಪಡೆದು ಒಟಿಟಿಯಲ್ಲಿ ಹೊಸ ದಾಖಲೆ ಬರೆದಿದೆ.
ಹೌದು! ಅಯ್ಯನ ಮನೆ ವೆಬ್ ಸೀರೀಸ್ ನಲ್ಲಿ ದಿಯಾ ಖ್ಯಾತಿಯ ಖುಷಿ ರವಿ ಹಾಗೂ ಕನ್ನಡದ ಖ್ಯಾತ ಒಲವಿನ ನಿಲ್ಧಾಣ ಸೀರಿಯಲ್ ನಾಯಕ ಅಕ್ಷಯ್ ನಾಯಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಅಯ್ಯನ ಮನೆ ವೆಬ್ ಸೀರಿಸನ್ನು ರಮೇಶ್ ಇಂದಿರಾ ನಿರ್ದೇಶಿಸಿದ್ದಾರೆ ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್ ನಿರ್ಮಿಸಿದ್ದಾರೆ. ಈ ಕಥೆಯಲ್ಲಿ ಜಾಜಿ ಎಂಬ ಯುವತಿಯನ್ನು ಅನುಸರಿಸುತ್ತದೆ. ಅವಳು ಕರಾಳ ಭೂತಕಾಲದಿಂದ ಕಾಡುವ ಕುಟುಂಬದಲ್ಲಿ ಮದುವೆಯಾಗುತ್ತಾಳೆ.
ಕುಟುಂಬದ ಮೂವರು ಸೊಸೆಯಂದಿರು ಅದೇ ಪೂರ್ವಜರ ಭವನದಲ್ಲಿ ಅನುಮಾನಾಸ್ಪದ ಸಂದರ್ಭಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಜಾಜಿ ತನ್ನ ಹೊಸ ಜೀವನದಲ್ಲಿ ನೆಲೆಸುತ್ತಿದ್ದಂತೆ, ಮನೆಗೆ ಸಂಬಂಧಿಸಿದ ಆತಂಕಕಾರಿ ಇತಿಹಾಸವನ್ನು ಅವಳು ಬಹಿರಂಗಪಡಿಸಲು ಪ್ರಾರಂಭಿಸುತ್ತಾಳೆ. ಒಟ್ಟಿನಲ್ಲಿ ಕಥೆಯಲ್ಲಿ ನಿಗೂಡವಾಗಿದ್ದು. ನೋಡುಗರಲ್ಲಿ ತುಂಬಾ ಕ್ಯೂರಿಯಾಸಿಟಿಯನ್ನು ಹುಟ್ಟಿಸುತ್ತದೆ.