ಇಂದಿನಿಂದ ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. 8ನೇ ಟ್ರೋಫಿಗೆ ಮುತ್ತಿಕ್ಕಲು ಹಲವು ತಂಡಗಳು ಪ್ರಯತ್ನಿಸುತ್ತಿವೆ.
ಹಾಲಿ ಚಾಂಪಿಯನ್ ಭಾರತ ತಂಡ ಟ್ರೋಫಿ ಉಳಿಸಿಕೊಳ್ಳಲು ಹೋರಾಟ ನಡೆಸಲು ಸಜ್ಜಾಗಿದೆ. ಭಾರತ ತಂಡ ತನ್ನ ಅಭಿಯಾನವನ್ನು ಮಲೇಷ್ಯಾ ವಿರುದ್ಧ ನಡೆಯುವ ಪಂದ್ಯದಿಂದ ಆರಂಭಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಜಪಾನ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡ ಲೀಗ್ ಹಂತದಲ್ಲಿ ಒಂದು ಬಾರಿ ಪರಸ್ಪರ ಕಾದಾಟ ನಡೆಸಲಿವೆ. ಅಗ್ರ -4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. 2016, 2023ರಚಾಂಪಿಯನ್, 2013 ಹಾಗೂ 2018ರ ರನ್ನರ್-ಅಪ್ ಭಾರತ ತಂಡ ಮಲೇಷ್ಯಾ ಪಂದ್ಯದ ನಂತರ ನ.12ಕ್ಕೆ ದ.ಕೊರಿಯಾ, ನ.14ರಂದು ಥಾಯ್ಲೆಂಡ್, ನ.16ಕ್ಕೆ ಚೀನಾ, ನ.17ರಂದು ಜಪಾನ್ ವಿರುದ್ಧ ಹೋರಾಟ ನಡೆಸಲಿದೆ. ಫೈನಲ್ ಪಂದ್ಯ ನ.20ಕ್ಕೆ ನಡೆಯಲಿದೆ. ಭಾರತದ ಪಂದ್ಯಗಳು ಪ್ರತಿ ದಿನ ಸಂಜೆ 4.45ಕ್ಕೆ ಆರಂಭವಾಗಲಿವೆ.