ಬೆಂಗಳೂರು: ಬಿಬಿಎಂಪಿಯ ಮತ್ತೊಂದು ಎಡವಟ್ಟು ಬಯಲಾಗಿದೆ.
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಕಡಿಮೆ ಮಾಡಲು ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಪ್ರಮುಖ ಪ್ರದೇಶಗಳಲ್ಲಿ ಪಾಲಿಕೆಯಿಂದ ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿತ್ತು. ಅದರೆ, ಈಗ ಪಾರ್ಕಿಂಗ್ ಲಾಟ್ ಬಂದ್ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ನಗರದ ಪ್ರಮುಖ ರಸ್ತೆಯಾಗಿರುವ ಜೆಸಿ ರಸ್ತೆಯಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈಗ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಖಾಸಗಿ ಕಂಪನಿಗೆ ಲೀಸ್ ನೀಡಿದೆ. ಸ್ಥಳೀಯ ಶಾಸಕರ ಒತ್ತಯದ ಮೇರೆಗೆ ಪಾರ್ಕಿಂಗ್ ಲಾಟ್ ಲೀಸ್ ಗೆ ನೀಡಲಾಗಿದೆ ಎನ್ನಲಾಗುತ್ತಿದೆ.
ಈ ಖಾಸಗಿ ಕಾರ್ ಕಂಪನಿಯು ತಮ್ಮ ಕಂಪನಿಯ ವಾಹನಗಳ ರಿಪೇರಿಗೆ ಅದನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಜೆಸಿ ರಸ್ತೆಯಲ್ಲಿ ಪಾರ್ಕಿಂಗ್ ಕೊರತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಾರ್ ಶೋ ರೂಮ್ ಗೆ ಪಾರ್ಕಿಂಗ್ ಜಾಗವನ್ನು ಲೀಸ್ ಗೆ ನೀಡಿ ಕಿಕ್ ಬ್ಯಾಕ್ ಪಡೆದಿರುವ ಆರೋಪ ಬಿಬಿಎಂಪಿ ಮೇಲೆ ಕೇಳಿ ಬಂದಿದೆ.