ಬೆಂಗಳೂರು: ಕಳೆದ ಮೂರು ತಿಂಗಳಿಂದ ನೀರಿನ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಮೀನಮೇಷ ಏಣಿಸುತ್ತಿತ್ತು. ಈಗ ಇದಕ್ಕೆ ಕಾಲ ಕೂಡಿ ಬಂದಿದೆ. ನಾಳೆಯಿಂದ ಜಾರಿಗೆ ಬರುವಂತೆ ನೀರಿನ ಬೆಲೆ ನಾಲ್ಕು ಸ್ಲ್ಯಾಬ್ ಗಳಲ್ಲಿ ದರ ಫಿಕ್ಸ್ ಮಾಡಿ ಅದೇಶ ನೀಡುವ ಸಾಧ್ಯತೆ ಇದೆ.
ನಾಳೆ ಹೊರ ಬಿಳಲ್ಲಿದೆ ನೀರಿನ ಹೊಸ ದರ ಪಟ್ಟಿ!
ಕೊನೆಗೂ ನೀರಿನ ಬೆಲೆ ಏರಿಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಳೆಯಿಂದ ಜಾರಿಗೆ ಬರುವಂತೆ ಹೊಸ ದರ ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ನೀರಿನ ಬೆಲೆ ಏರಿಕೆ ಮಾಡುತ್ತೇವೆ ಅಂತ ಸರ್ಕಾರ ಹೇಳಿತ್ತು..ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ನಾಳೆ ಅಧಿಕೃತವಾಗಿ ನೀರಿನ ಬೆಲೆ ಹೆಚ್ಚಳದ ಅದೇಶ ಬರುವ ಸಾಧ್ಯತೆ ಇದ್ದು. ವಸತಿ ಬಳಕೆಯ ಪ್ರತಿ ಲೀಟರ್ ಗೆ ಒಂದು ಪೈಸ್ ದರ ಏರಿಕೆ ಬಹುತೇಕ ನಿಶ್ಚಿತವಾಗಿದೆ.
ಪರಿಷ್ಕೃತ ದರ ವಸೂಲಿಗೆ ಜಲಮಂಡಲಿ ಸಿದ್ದತೆ ನಡೆಸಿದೆ. ಸದ್ಯ ವಸತಿ ಕಟ್ಟಡಗಳಿಗೆ ಪೂರೈಕೆ ಮಾಡುವ ನೀರಿಗೆ ಒಟ್ಟು ನಾಲ್ಕು ಸ್ಲ್ಯಾಬ್ ನಲ್ಲಿ ದರ ನಿಗದಿ ಪಡಿಸಲಾಗಿದ್ದು, ಪ್ರತಿ ಲೀಟರ್ ಗೆ 1 ಪೈಸೆ ಗರಿಷ್ಟ ದರ ಹೆಚ್ಚಳ ಮಾಡುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.