ಚಿಕ್ಕಬಳ್ಳಾಪುರ: ಲಾಂಗ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಕಿಲಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಆಟೋ ಚಾಲಕನೋರ್ವ(Auto Driver) ಲಾಂಗ್ ಹಿಡಿದು ತನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಈ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿಯ ಆಟೋ ಚಾಲಕ ಅನಿಲ್ ಕುಮಾರ್ ಕಿಂಗ್ ಎಂದು ಮಾರಕಾಸ್ತ್ರಗಳಿಂದ ಕೇಕ್ ಕತ್ತರಿಸಿದ್ದಾನೆ. ಆ ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.