ಬೆಂಗಳೂರು: ಜಲ ಮಂಡಳಿಯಿಂದ ಅಲ್ ಟೈಮ್ಸ್ ವಾಟರ್ ಯೋಜನೆ ಆರಂಭಿಸಲಾಗುತ್ತಿದೆ. ಈಗಿದ್ದ ಆರ್ ಓ ಪ್ಲಾಂಟ್ ಗಳ ಹೆಸರು ಬದಲಾವಣೆ ಮಾಡಲು ಜಲ ಮಂಡಳಿ ಸಿದ್ಧತೆ ನಡೆಸಿದೆ.
ಆರ್ ಓ ಪ್ಲಾಂಟ್ ಗಳು ಇಲ್ಲಿಯವರೆಗೆ ಬೆಳಗ್ಗೆ 7 ರಿಂದ ರಾತ್ರಿ 7ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಇನ್ನು ಮುಂದೆ ಹೆಸರು ಬದಲಾಯಿಸಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತಿದೆ.
ನಗರದಲ್ಲಿ ಇರುವ ಸುಮಾರು 150ಕ್ಕೂ ಅಧಿಕ ಅರ್ ಓ ಪ್ಲಾಂಟ್ ಗಳನ್ನು ಎಟಿಎಂ ರೂಪದಲ್ಲಿ ಕಾರ್ಯ ನಿರ್ವಹಿಸಲು ಪಾಲಿಕೆ ಮುಂದಾಗಿದೆ. ಇರುವ ಅರ್ ಓ ಪ್ಲಾಂಟ್ ಗಳನ್ನು ಕಾವೇರಿ ಎಟಿಎಂ ಎಂದು ಹೆಸರು ಬದಲಾವಣೆ ಮಾಡಲಾಗಿದೆ.
ಕಾವೇರಿ ಎಟಿಎಂನಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡಲಾಗುತ್ತದೆ. 5 ರೂ. ಹಾಕಿ ಕಾವೇರಿ ಎಟಿಎಂ ನಲ್ಲಿ 15 ಲೀಟರ್ ನೀರು ಪಡೆಯಬಹುದು.