78 ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡು 24ರ ವರೆಗೆ ನಡೆಯಲಿದ್ದು, ಕನ್ನಡದ ಹಲವಾರು ನಟಿಯರು ಭಾಗವಹಿಸಿ ಮಿಂಚುತ್ತಿದ್ದಾರೆ.
ಇದೀಗ ಅದೇ ಸಾಲಿನಲ್ಲಿ ಕನ್ನಡತಿ ನಟಿ ಪ್ರಣೀತಾ ಸುಭಾಷ್ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ. ಕನ್ನಡದಿಂದ ಮತ್ತೊಬ್ಬಳು ನಟಿ ಭಾರತೀಯ ಪರಂಪರೆಯ ಪ್ರತಿನಿಧಿಯಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು.
ಕನ್ನಡದ ನಟಿ ಪ್ರಣೀತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಭಾರತದಿಂದ ಬಾಲಿವುಡ್ ನಟಿಯರಾದ ಜಾಹ್ನವಿ ಕಪೂರ್, ಅದಿತಿ ರಾವ್ ಹಾಗೂ ಐಶ್ವರ್ಯ ರೈ ಅವರುಗಳ ಜೊತೆಗೆ ಫ್ರಾನ್ಸ್ ನಲ್ಲಿ 78ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರಳಿರುವ ಪ್ರಣೀತಾ ಕಾನ್ ಫಿಲ್ಮ್ ಫೆಸ್ಟಿವಲ್ ಅನುಭವದಿಂದ ಬಹಳ ಖುಷಿಪಟ್ಟಿದ್ದಾರೆ.

ನಟಿ ಪ್ರಣೀತಾ ಚೈನೀಸ್ ಸಿನಿಮಾದ ಪ್ರೀಮಿಯರ್ ನಲ್ಲಿ ಭಾಗಿಯಾದ ಸಿನಿಮಾ ವೀಕ್ಷಿಸಿದ ಬಳಿಕ ಇದೀಗ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದಾರೆ. ಬೇಬಿ ಪಿಂಕ್ ಡ್ರೆಸ್, ರೆಡ್ ಕಲರ್ ಡ್ರೆಸ್ ಮತ್ತು ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ್ದ ಪ್ರಣೀತಾ ಕಾನ್ ನಲ್ಲಿ ಇದು ನನ್ನ ಡೆಬ್ಯೂ, ಅದರಲ್ಲೂ ಕಾನ್ ರೆಡ್ ಕಾರ್ಪೆಟ್ ವಿಶ್ವದ ಪ್ರತಿಷ್ಠಿತ ಸಮಾರಂಭಗಳಲ್ಲಿ ಒಂದು. ಅಲ್ಲಿ ನಮ್ಮ ದೇಶದ ಹೆಮ್ಮೆ ಸೀರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಭೇಟಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಈ ಫಿಲಂ ಫೆಸ್ಟಿವಲ್ ನಲ್ಲಿ ಐಶ್ವರ್ಯಾ ರೈ, ಜಾನ್ವಿ ಕಪೂರ್, ಆದಿತ್ಯ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರೀಯಾಶೀಲರಾಗಿರುವ ಇವರು ಸಾಮಾಜಿಕ ಕಾರ್ಯಗಳಲ್ಲಿಯೂ ಗಮನ ಸೆಳೆಯುವ ನಟಿ, ಜೊತೆಗೆ ತನ್ನ ಫ್ಯಾಮಿಲಿ ಜೊತೆಗೂ ಸಮಯ ಕಳೆಯುತ್ತಾ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.