ಕನ್ನಡತಿ ಡಿಶಾ ಮದನ್ 78ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ವರ್ಷಗಳ ಹಿಂದಿನ ಕಾಂಚಿವರಂ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ವಿದೇಶದಲ್ಲಿ ನಡೆದಿರುವಂತಹ ಈ ಫೆಸ್ಟಿವಲ್ ನಲ್ಲಿ ದೇಶ ವಿದೇಶದ ಸಾಕಷ್ಟು ನಟ- ನಟಿಯರು ಭಾಗಿಯಾಗಿದ್ದರು. ಕನ್ನಡದಿಂದ ಈ ಚಲನಚಿತ್ರೋತ್ಸವದಲ್ಲಿ ಕನ್ನಡದ ಕಿರುತೆರೆ ನಟಿ ದಿಶಾ ಮದನ್ ಭಾಗವಹಿಸಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿ, ಪೋಸ್ಟ್ ಮಾಡಿರುವಂತಹ ಫೋಟೋದಲ್ಲಿ ಶೋಲ್ಡರ್ ಲೆಸ್ ಬ್ಲೌಸ್ ಗೆ ಕೆಂಪು ಸೀರೆಯುಟ್ಟು ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಲನಚಿತ್ರೋತ್ಸವ ಮೇ 13 ರಿಂದ 24ರ ವರೆಗೆ ನಡೆಯಲಿದ್ದು, ದಿಶಾ ಉಟ್ಟಿರುವಂತಹ ಸೀರೆಗೆ ಕನ್ನಡಿಗರು ಪಾಸಿಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಪರದೇಶಕ್ಕೆ ಹೋದರೂ ಭಾರತೀಯ ಸಂಸ್ಕೃತಿ ಮರೆಯದ ಈ ನಟಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಫಿಲಂ ಫೆಸ್ಟಿವಲ್ ಗೆ ಕೆಲವು ನಟ-ನಟಿಯರಿಗೆ ಅಷ್ಟೇ ಆಹ್ವಾನ ನೀಡಲಾಗಿತ್ತು. ಅದರಲ್ಲಿ ಕನ್ನಡದ ನಟಿಯರಲ್ಲಿ ದಿಶಾ ಮದನ್ ಅವರಿಗೆ ಆಹ್ವಾನ ನೀಡಲಾಗಿದೆ. ಇಂತಹ ಅವಕಾಶದಿಂದ ಈ ನಟಿಯ ಮುಂದಿನ ಸೀರಿಯಲ್ , ಸಿನಿಮಾ ಕೆರಿಯರ್ ಗೆ ಸಹಾಯವಾಗಲಿದೆ.
ದಿಶಾ ಮದನ್ ಹಿನ್ನಲೆ ಏನು?
ನಟಿ ದಿಶಾ ಮದನ್ ಬೆಂಗಳೂರಿನವರೇ ಆಗಿದ್ದು, ತನ್ನ ಚಿಕ್ಕ ವಯಸ್ಸಿನಲ್ಲಿ ನಟನೆ ಕಲಿತು ನೃತ್ಯಭ್ಯಾಸಗಳನ್ನು ಮಾಡುತ್ತಿದ್ದರು. ಹೀಗೆ ಅವರು ಸಣ್ಣ ವಯಸ್ಸಿನಲ್ಲಿ ರಾಜಕುಮಾರ್ ಅವರ ಸಿನಿಮಾಗಳ ಹಾಡನ್ನು ಹಾಡಿ ಅವರ ತಾಯಿ ಅವರನ್ನು ಮಲಗಿಸುತ್ತಿದ್ದರಂತೆ. ಹೀಗೆ ದೊಡ್ಮನೆ ಕುಟುಂಬ ನೋಡಿ ಬೆಳೆದ ಇವರು ಅಕಸ್ಮಾತ್ ಆಗಿ ನಟನೆಗೆ ಎಂಟ್ರಿ ಕೊಟ್ಟರು. ಇದೀಗ ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಭಾವನಾ ಎನ್ನುವಂತಹ ಪಾತ್ರದ ಮೂಲಕ ದಿಶಾ ಮದನ್ ಜನಪ್ರಿಯತೆ ಗಳಿಸಿದ್ದಾರೆ.
ದಿಶಾ ಮದನ್ ಲವ್ ಮ್ಯಾರೇಜ್ ಆಗಿದ್ದು, ಇದೀಗ ಮಗು ಇದ್ದರೂ ಕೂಡ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರು ತನ್ನ ಫ್ಯಾಮಿಲಿಯ ಜೊತೆಗೆ ನಟನೆಯ ಜೀವನ ಕೂಡ ಅದ್ಭುತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಇವರು ಮಾಡುವಂತಹ ಕಂಟೆಂಟ್ ಗಳಿಗೆ ವಿಭಿನ್ನವಾಗಿದ್ದು, ಸೋಶಿಯಲ್ ಮೀಡಿಯಾ ಮೂಲಕವೂ ಈ ನಟಿಗೆ ಸಾಕಷ್ಟು ಜನ ಫ್ಯಾನ್ ಫಾಲೋವರ್ಸ್ ಇದ್ದಾರೆ.