ನಟಿ ಕರಿಷ್ಮಾ ಕಪೂರ್ (Karisma Kapoor) ಮಾಜಿ ಪತಿ ಸಂಜಯ್ ಕಪೂರ್ (Sunjay Kapur) ಅಂತ್ಯಕ್ರಿಯೆ ಇಂದು ನಡೆಯಿತು.
ದಂಪತಿ ವಿಚ್ಛೇದನ (Divorce) ಪಡೆದು ಹಲವು ವರ್ಷಗಳೇ ಕಳೆದಿದ್ದರೂ ಗುಟ್ಟಾಗಿ ಭೇಟಿಯಾಗುತ್ತಿದ್ದರು. ದೆಹಲಿಯಲ್ಲಿ (Delhi) ನಡೆದ ಸಂಜಯ್ ಕಪೂರ್ ಅಂತಿಮ ಸಂಸ್ಕಾರ ಪ್ರಕ್ರಿಯೆಯನ್ನು ಸಂಜಯ್ ಕರಿಷ್ಮಾ ದಂಪತಿಯ ಮಕ್ಕಳು ನಡೆಸಿದ್ದಾರೆ. ಕರಿಷ್ಮಾ ಕೂಡ ಭಾಗವಹಿಸಿದ್ದರು.
53 ವರ್ಷದ ಸಂಜಯ್ ಕಪೂರ್ ಹೃದಯಾಘಾತಕ್ಕೆ ಬಲಿಯಾಗಿದ್ದರು. 12ರಂದು ಸಂಜಯ್ ಕಪೂರ್ ಇಂಗ್ಲೆಂಡ್ನಲ್ಲಿ (England) ಪೊಲೋ ಮ್ಯಾಚ್ನಲ್ಲಿ ಪಾಲ್ಗೊಂಡಿದ್ದ ವೇಳೆ ಅಲ್ಲಿಯೇ ಪ್ರಾಣ ಬಿಟ್ಟಿದ್ದರು. ಇದೀಗ ಅವರ ಪಾರ್ಥೀವ ಶರೀರವನ್ನು ದೆಹಲಿಗೆ ತರಲಾಗಿತ್ತು.
2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆ ವಿವಾಹವಾಗಿದ್ದ ಕರಿಷ್ಮಾ 2016ರಲ್ಲಿ ದೂರಾಗಿದ್ದರು. ಈ ತಾರಾ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.