ನಟ ಜಿತೇಂದ್ರ ಒಂದು ಕಾಲದಲ್ಲಿ ಬಾಲಿವುಡ್ ಆಳಿದವರು. ಅಮಿತಾಬ್ ಬಚ್ಚನ್ಗೂ ಮುಂಚೆಯೇ ಸ್ಟಾರ್ ಆಗಿ ಬಾಲಿವುಡ್ನಲ್ಲಿ ಮೆರೆದವರು. ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ 83ನೇ ವಯಸ್ಸಿನಲ್ಲಿ ದೊಡ್ಡ ಮೊತ್ತದ ಹಣ ಗಳಿಸಿ ಸುದ್ದಿಯಾಗಿದ್ದಾರೆ.
ಜಿತೇಂದ್ರ ಅವರು ಮುಂಬೈ ಹಾಗೂ ಅದರ ಹೊರವಲಯದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದರು. ಮುಂಬೈನ ಅಂಧೇರಿ ಬಳಿ ದೊಡ್ಡದಾದ ಸ್ಥಳವೊಂದು ಜಿತೇಂದ್ರ ಅವರ ಕುಟುಂಬದ ಒಡೆತನದಲ್ಲಿತ್ತು. ಸದ್ಯ ಆ ಸ್ಥಳವನ್ನು ಎನ್ಟಿಟಿ ಗ್ಲೋಬಲ್ ಡಾಟಾ ಸೆಂಟರ್ ಗೆ ಮಾರಾಟ ಮಾಡಿದ್ದಾರೆ. ಇದರಿಂದಾಗಿ ಜಿತೇಂದ್ರ ಅವರು 855 ಕೋಟಿ ರೂ. ಗಳಿಸಿದ್ದಾರೆ. 2.39 ಎಕರೆ ಜಾಗವನ್ನು ಜಿತೇಂದ್ರ ಹಾಗೂ ಅವರ ಕುಟುಂಬ ಮಾರಾಟ ಮಾಡಿದೆ. 2025ರಲ್ಲಿ ನೋಂದಣಿಯಾಗಿತ್ತು ಎನ್ನಲಾಗಿದೆ.