ನಟ ಅಜಿತ್ ಕುಮಾರ್ (Ajith Kumar) ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.
ಅಜಿತ್ ಕುಮಾರ್ ಕಾಲಿಗೆ (Leg Injury) ಪೆಟ್ಟಾಗಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಅಜಿತ್ ಅವರನ್ನು ಭೇಟಿ ಮಾಡಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಮುಗಿ ಬಿದ್ದಿದ್ದರಿಂದಾಗಿ ಜನ ಜಂಗುಳಿ ಉಂಟಾಗಿ ಅಜಿತ್ ಕುಮಾರ್ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ನಟ ಅಜಿತ್ ಕುಮಾರ್ ಇತ್ತೀಚೆಗಷ್ಟೇ ದೆಹಲಿಗೆ ತೆರಳಿದ್ದರು. ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಮರಳಿ ಚೆನ್ನೈಗೆ ಮರಳಿದ್ದರು. ಈ ವೇಳೆಯೇ ಈ ಅಚಾತುರ್ಯ ನಡೆದಿದೆ.
ಆದರೆ, ಗಂಭೀರ ಸಮಸ್ಯೆ ಆಗಿಲ್ಲ ಎನ್ನಲಾಗಿದೆ. ಕೆಲವೇ ಗಂಟೆಗಳಲ್ಲಿ ಅವರು ಆಸ್ಪತ್ರೆಯಿಂದಲೂ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.