ಯುವತಿಯೊಬ್ಬರು ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪುಣೆಯ ಇವೈ ನಲ್ಲಿ ಉದ್ಯೋಗಿಯಾಗಿದ್ದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಸೆಬಾಸ್ಟಿಯನ್ (26) ಸಾವನ್ನಪ್ಪಿದ ಯುವತಿ.
ಇವರು “ಕೆಲಸದ ಒತ್ತಡ” ದಿಂದ ಸಾವನ್ನಪ್ಪಿದ್ದಾರೆಂದು ಅವರ ತಾಯಿ ಅನಿತಾ ಆಗಸ್ಟಿನ್ ಅವರು ಇವೈ ಇಂಡಿಯಾ ಅಧ್ಯಕ್ಷರಿಗೆ ಬರೆದ ಇಮೇಲ್ ನಿಂದ ತಿಳಿದು ಬಂದಿದೆ.
ಟಾರ್ಗೆಟ್ ಮುಟ್ಟುವ ಭರದಲ್ಲಿ ಯುವತಿಯು ಹಗಲರು ರಾತ್ರಿ ಕೆಲಸ ಮಾಡಿದ್ದರಿಂದಾಗಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಾಯಿ ಇಮೇಲ್ ನಲ್ಲಿ ಬರೆದುಕೊಂಡಿದ್ದಾರೆ.
ಮೃತ ಯುವತಿ ಅನ್ನಾ 2023 ರಲ್ಲಿ ತಮ್ಮ CA ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಮಾರ್ಚ್ 2024 ರಲ್ಲಿ EY ಪುಣೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸಕ್ಕೆ ಸೇರಿಕೊಂಡ ಕೇವಲ 4 ತಿಂಗಳಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು EY ಕಂಪೆನಿಯ ವಿರುದ್ದ ಅನ್ನಾ ತಾಯಿ ದೂರು ದಾಖಲಿಸಿದ್ದಾರೆ. ಕೆಲಸದ ಹೊರೆ, ಹೊಸ ಪರಿಸರ ಮತ್ತು ಆತಂಕ, ನಿದ್ರಾಹೀನತೆ ಮತ್ತು ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದ್ದಳು. ಆದರೆ ಕಠಿಣ ಪರಿಶ್ರಮ ಯಶಸ್ಸಿಗೆ ಹಾದಿ ಎಂಬು ನಂಬುತ್ತ ತಾನೇ ಬಲಿಯಾಗಿದ್ದಾಳೆಂದು ಕಣ್ಣೀರು ಸುರಿಸಿದ್ದಾರೆ.