ಬೆಂಗಳೂರು: ಯುವಕನೋರ್ವ ಮರ ಹತ್ತಿ ಹುಚ್ಚಾಟ ಮೆರೆದು ನಂತರ ಅಲ್ಲಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಯುವಕನು ಮರದಲ್ಲಿ ನೇತಾಡುವ ವೇಳೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಹೀಗಾಗಿ ಆತನ ರಕ್ಷಣೆಗೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಆದರೆ, ಅದು ವಿಫಲವಾಗಿದ್ದು, ಯುವಕನು ಸುಮಾರು 50 ಅಡಿಗಿಂತ ಹೆಚ್ಚು ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ಯುವಕ ಬೀಳುವಾಗ ಕೆಳಗೆ ಟಾರ್ಪಲ್ ಹಿಡಿದು ರಕ್ಷಣೆಗೂ ಪೊಲೀಸರು ಯತ್ನಿಸಿದ್ದಾರೆ. ಆದರೂ ಯುವಕ ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಕುಡಿದ ಮತ್ತಿನಲ್ಲಿ ಮರ ಹತ್ತಿ ಹುಚ್ಚಾಟ ಮೆರೆದಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
ನೆಲಕ್ಕೆ ರಭಸವಾಗಿ ಬಿದ್ದ ಹಿನ್ನೆಲೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೆಳಗೆ ಬಿದ್ದ ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿದ್ದ ರಭಸಕ್ಕೆ ಯುವಕನ ಸೊಂಟಕ್ಕೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.