ಬೆಳಗಾವಿ: ಮಹಿಳೆಯೊಬ್ಬಳು ತನ್ನ ಮನೆಯನ್ನೇ ದೋಚಿ, ಪರ ಪುರುಷನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಬೆಳಗಾವಿ (Belagavi) ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ಚಿನ್ನಾಭರಣ, ಹಣ ಸೇರಿದಂತೆ ಆಸ್ತಿಯ ದಾಖಲೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.
ಮಾಸಾಬಿ(28)ಪರಾರಿಯಾಗಿರುವ ಮಹಿಳೆ. ಗ್ರಾಮದ ಬಸವರಾಜ ಸೀತಿಮನಿ ಎಂಬ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದಾಳೆ. ಮನೆಯಲ್ಲಿದ್ದ 60 ಗ್ರಾಂ ಚಿನ್ನ, ಐದು ಲಕ್ಷ ಹಣ, ಸೈಟ್ ದಾಖಲೆ, ಕಾರು, ಮನೆಯ ಸಿಲಿಂಡರ್ ಸೇರಿದಂತೆ ಮನೆಯಲ್ಲಿದ್ದ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾಳೆ.
ಪತಿ ಆಸಿಫ್ ಕುಟುಂಬಸ್ಥರನ್ನು ಬಿಟ್ಟು ಬಂದು ಪತ್ನಿಯೊಂದಿಗೆ ಮಾರಿಹಾಳದಲ್ಲಿ ವಾಸ ಮಾಡುತ್ತಿದ್ದರು. ದುಡಿದು ಪತ್ನಿಯ ಹೆಸರಿನಲ್ಲಿ ಎರಡು ಸೈಟ್ ಕೂಡ ಖರೀದಿ ಮಾಡಿದ್ದರು. ಆದರೆ, ಪತ್ನಿ ಮಾತ್ರ ಎಲ್ಲವನ್ನೂ ತೆಗೆದುಕೊಂಡು ಪರ ಪರುಷನೊಂದಿಗೆ ಪರಾರಿಯಾಗಿದ್ದಾಳೆ. ಇದರಿಂದ ಆತಂಕಗೊಂಡಿರುವ ಪತಿ ಆಸೀಫ್, ಪತ್ನಿ ಹಾಗೂ ಮಕ್ಕಳನ್ನು ಹುಡುಕಿಕೊಡಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.