ಬೆಂಗಳೂರು: ಲಾಂಗ್ ಹಿಡಿದು ಪುಡಿ ರೌಡಿ ಪುಂಡಾಟ ಮೆರೆದಿರುವ ಘಟನೆ ನಗರದ ಕೆ.ಆರ್. ಪುರಂ ಮಾರುಕಟ್ಟೆಯಲ್ಲಿ ನಡೆದಿದೆ.
ಈ ಪುಡಿರೌಡಿ ಲಾಂಗ್ ಹಿಡಿದು ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಒಡೆದು ಪುಡಿ ಮಾಡಿದ್ದಾನೆ. ನಗರದ ಕೆ ಆರ್ ಪುರಂ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ಕಾರು, ಗೂಡ್ಸ್ ವಾಹನಗಳ ಮೇಲೆ ದಾಳಿ ನಡೆಸಿದ್ದಾನೆ.
ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ವ್ಯಾಪಾರಿಗಳಿಗೆ ಹಾಗೂ ಜನರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುಡಿರೌಡಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.