ಬೆಂಗಳೂರು: ನಡು ರಸ್ತೆಯಲ್ಲಿಯೇ ಯುವತಿಯ ಕೈ ಹಿಡಿದು ಯುವಕ ವಿಕೃತಿ ಮೆರೆದಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಟಿ.ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಒಬ್ಬ ಯುವತಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ವಿನೋದ್ ಎಂಬ ಬೀದಿ ಕಾಮಣ್ಣ ಯುವತಿಯನ್ನು ಅಡ್ಡಗಟ್ಟಿ ಎಳೆದಾಡಿ ಇನ್ ಸ್ಟಾಗ್ರಾಂ ಐಡಿ ಕೊಡುವಂತೆ ಪಟ್ಟು ಹಿಡಿದು ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ.
ಈ ವೇಳೆ ಕಾಮುಕನು ಯುವತಿಯ ಮೈ ಕೈ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಯುವತಿ ತಕ್ಷಣ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಯುವತಿಯ ತಾಯಿ ಬರುವವರೆಗೂ ತನ್ನ ವಿಕೃತಿಯನ್ನು ಮುಂದುವರಿಸಿದ್ದಾನೆ. ಅಲ್ಲಿದ್ದ ಸ್ಥಳಿಯರು ತಕ್ಷಣ 112 ಗೆ ಕರೆ ಮಾಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಯುವತಿಯನ್ನು ರಕ್ಷಿಸಿದ್ದಾರೆ. ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತಿದೆ. ಆರೋಪಿಯನ್ನು ವಿನೋದ್ ಎನ್ನಲಾಗಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.