ಬಳ್ಳಾರಿ: ಪೀರಲು ದೇವರು ಹೊತ್ತಿದ್ದ ವ್ಯಕ್ತಿ ಮೊಹರಂ ಹಬ್ಬದ ಕತ್ತಲು ರಾತ್ರಿ ವೇಳೆ ಅಗ್ನಿಕುಂಡದಲ್ಲಿ ಬಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಚಾಗನೂರು ಗ್ರಾಮದಲ್ಲಿ ನಡೆದಿದೆ.
ಅಗ್ನಿ ತುಳಿಯುವಾಗ ಕಾಲು ಜಾರಿ ಎಡವಿ ಬಿದ್ದ ಪೀರಲು ದೇವರು ಹೊತ್ತಿದ್ದ ದಾದಪೀರ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ಮೊಹರಂ ಕತ್ತಲು ರಾತ್ರಿ ಹಿನ್ನೆಲೆ ಪೀರಲು ದೇವರ ಹೊತ್ತು ಅಗ್ನಿ ತುಳಿಯಲು ಮುಂದಾಗಿದ್ದ ದಾದಾಪೀರ್ ತಮ್ಮ ನಿಯಂತ್ರಣ ತಪ್ಪಿ ಅಗ್ನಿ ಕುಂಡಕ್ಕೆ ಎಡವಿ ಬಿದ್ದಿದ್ದಾರೆ. ಅಗ್ನಿಕುಂಡದ ಪಕ್ಕದಲ್ಲೇ ನಿಂತಿದ್ದ ಭಕ್ತಾದಿಗಳು ಅವರನ್ನು ಕೂಡಲೇ ಅಗ್ನಿಕುಂಡದಿಂದ ಮೇಲಕ್ಕೆತ್ತಿದ್ದಾರೆ. ಹಾಗಾಗಿ ದೊಡ್ಡ ಅನಾಹುತ ತಪ್ಪಿದೆ.