ಚಿಕ್ಕಮಗಳೂರು: ಸಂಗಾತಿ ಸೆಳೆಯುವುದಕ್ಕಾಗಿ ಗಂಡು ನವಿಲೊಂದು ಗರಿಬಿಚ್ಚಿ ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಗಾತಿ ಮನಸ್ಸು ಗೆಲ್ಲುವುದಕ್ಕಾಗಿ ಗಂಡು ನವಿಲು ಗರಿ ಬಿಚ್ಚಿ ನೃತ್ಯ ಮಾಡುತ್ತದೆ. ಅಂತೆಯೇ ಇಲ್ಲೊಂದು ನವಿ ನೃತ್ಯ ಮಾಡಿದೆ. ಕಳಸ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೋರ್ವರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ. ಜನರು ಇದನ್ನು ಕಂಡು ಆಶ್ಚರ್ಯ ಪಡುತ್ತಿದ್ದಾರೆ.