ಬೆಂಗಳೂರು: ಸಿಎಂ ನಿವಾಸದ ಹತ್ತಿರ ದೊಡ್ಡ ಮರವೊಂದು ಧರೆಗುರುಳಿದ್ದು, ಎರಡು ಕಾರುಗಳು ಜಖಂ ಆಗಿರುವ ಘಟನೆ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಎರಡು ವಾಹನಗಳ ಮೇಲೆ ಮರ ಉರುಳಿ ಬಿದ್ದಿದೆ. ಮರ ಉರುಳಿ ಬಿದ್ದ ಪರಿಣಾಮ ಎರಡು ವಾಹನಗಳು ಸಂಪೂರ್ಣ ಜಖಂ ಆಗಿವೆ. ಟೆಂಪೋ ಟ್ರಾವೆಲರ್ ಮತ್ತು ಇನ್ನೋವಾ ಕಾರುಗಳ ಮೇಲೆ ಮರ ಬಿದ್ದಿದೆ. ಅಶೋಕ ಹೋಟೆಲ್ ಮುಂಭಾಗದಲ್ಲಿರುವ ಮರ ಬಿದ್ದಿದೆ. ಪರಿಣಾಮ ಕೆಲ ಹೊತ್ತು ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿತ್ತು.