ಬೆಂಗಳೂರು: ಪೊಲೀಸರ ಚೀತಾ ಬೈಕ್ ನಲ್ಲಿ ಬಿಯರ್ ಬಾಟಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಅಶೋಕನಗರ ಠಾಣೆ ಪೊಲೀಸರದ್ದು ಎನ್ನಲಾದ ಚೀತಾ ಬೈಕ್ ನಲ್ಲಿ ಬಿಯರ್ ಬಾಟಲ್ ಪತ್ತೆಯಾಗಿದ್ದು, ಸಾರ್ವಜನಿಕರ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ. ಸಾರ್ವಜನಿಕರು ವೀಡಿಯೋ ಮಾಡಲು ಶುರು ಮಾಡುತ್ತಿದ್ದಂತೆ ಬೈಕ್ ಬಿಟ್ಟು ಪೋಲೀಸರು ಪರಾರಿಯಾಗಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಟ್ಟಿಗರು ತರಹೇವಾರು ಕಮೆಂಟ್ ಮಾಡುತ್ತಿದ್ದಾರೆ.