ಹೈಟೆನ್ಷನ್ ವಿದ್ಯುತ್ ತಂತಿ ಮೇಲೆ ಕೋತಿಯೊಂದು ಓಡಾಡಿ ಚೇಷ್ಟೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಹಕ್ಕಿಗಳಂತೆ ಹೈಟೆನ್ಷನ್ ವೈಯರ್ ಮೇಲೆ ಅಚ್ಚರಿ ಎಂಬಂತೆ ಕೋತಿ ಓಡಾಟ ನಡೆಸಿದೆ. ಕೋತಿಯ ಹುಚ್ಚಾಟದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಂಡರಕಿ ಗ್ರಾಮದ ಹೊರವಲಯದಲ್ಲಿರುವ ವಿದ್ಯುತ್ ತಂತಿ ಮೇಲೆ ಕೋತಿ ಓಡಾಡಿದೆ. ಅಪಾಯವನ್ನೂ ಲೆಕ್ಕಿಸದೆ ಹಕ್ಕಿಗಳಂತೆ ಕೋತಿ ಓಡಾಟ ನಡಿಸಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.