ಹಿಂದಿಯ ತ್ರಿ ಈಡಿಯಟ್ಸ್ ಸಿನಿಮಾ ಯಾರಿಗೆ ತಾನೆ ನೆನಪಿಲ್ಲ ಹೇಳಿ. ಅದರಲ್ಲಿ ಅಮೀರ್ ಖಾನ್ ರ ರ್ಯಾಂಚೋ ಸ್ಕೂಲ್ ಅದೆಷ್ಟೇ ಮರೆತ್ರೂ ಮರೆಯದ ಅನುಭವ ನೀಡುತ್ತಲೇ ಇದೆ.
ಹೌದು! ಅಂದು ಸಿನಿಮಾದ ಚಿತ್ರೀಕರಣ ನಡೆದ ಲಡಾಕ್ ನ ದ್ರುಕ್ ಪದ್ಮಾ ಕಾರ್ಪೋ ಶಾಲೆ ಮತ್ತೆ ಸುದ್ದಿಯಲ್ಲಿದೆ. ಈ ಪ್ರಾಯೋಗಿಕ ಶಾಲೆ ಶುರುವಾಗಿ 2 ದಶಕಗಳೇ ಕಳೆದು ಹೋಗಿದೆ. ಅದರಲ್ಲೂ ತ್ರಿ ಈಡಿಯಟ್ಸ್ ಸಿನಿಮಾ ಬಳಿಕ ಈ ಲಡಾಕ್ ನ ಶಾಲೆ ಜಗತ್ತಿನೆಲ್ಲೆಡೆ ಸುದ್ದಿ ಮಾಡಿತ್ತು. ಈ ಶಾಲೆಗೀಗ ಅಂತಿಮವಾಗಿ ಸಿಬಿಎಸ್ ಸಿ ಮಾನ್ಯತೆ ಲಭಿಸಿದೆ.
ದಶಕಗಳಿಂದ ಸಿಬಿಎಸ್ ಸಿ ಮಾನ್ಯತೆಯ ನಿರೀಕ್ಷೆಯಲ್ಲಿದ್ದ ಶಾಲೆಯ ಕನಸು ಇದೀಗ ಈಡೇರಿದೆ. ಸದ್ಯ ಈ ಪ್ರಯೋಗಾತ್ಮ ಶಾಲೆಯಲ್ಲಿ 10ನೇ ತರಗತಿವರೆಗೂ ಶಿಕ್ಷಣ ಬೋಧಿಸಲಾಗುತ್ತಿದೆ. ಹಾಗಂತಾ ಇಲ್ಲಿ ಪಠ್ಯದ ಬೋಧನೆಗಿಂತಾ ಹೆಚ್ಚು ವಿಷಯಾಧಾರಿತ ಪ್ರಯೋಗಾತ್ಮಕ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಇದೀಗ ಶಾಲೆಗೆ ಮನ್ನಣೆ ಸಿಕ್ಕಿದ್ದು, 2028ರ ವೇಳೆಗೆ ಶಾಲೆಯನ್ನು 12ನೇ ತರಗತಿವರೆಗೂ ವಿಸ್ತರಿಸೋ ಚಿಂತನೆ ಆಡಳಿತ ಮಂಡಳಿಗಿದೆ.