ದಾವಣಗೆರೆ : ಹಾವು ರಕ್ಷಣೆ ಮಾಡುವಾಗ 7 ಅಡಿ ಉದ್ದದ ಹಾವು ಕೊರಳಿಗೆ ಸುತ್ತಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಆನೆಕೊಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನೆಕೊಂಡ ಗ್ರಾಮದ ಸಿದ್ದಪ್ಪ ಎಂಬುವರ ಮನೆಯಲ್ಲಿ 7 ಅಡಿ ಉದ್ದನೆ ಹಾವು ಕಾಣಿಸಿಕೊಂಡಿತ್ತು. ಹೀಗಾಗಿ ಉರಗ ತಜ್ಙ ಬಸವರಾಜ್ ಆಗಮಿಸಿ ಹಾವು ರಕ್ಷಿಸುತ್ತಿದ್ದರು. ಈ ವೇಳೆ ಬಸವರಾಜ್ ಕೊರಳಿಗೆ ಹಾವು ಸುತ್ತಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.