ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿಗೆ ತಾಯಿ ಸರಿಯಾದ ಪಾಠ ಕಲಿಸಿರುವ ಘಟನೆಯೊಂದು ಕೊಚ್ಚಿಯಲ್ಲಿ ನಡೆದಿದೆ.
ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 59 ವರ್ಷದ ವ್ಯಕ್ತಿಗೆ ಬಾಲಕಿಯ ತಾಯಿ ಪಂಚ್ ಮಾಡಿದ್ದು, ಆತನ ಮೂಗಿನಿಂದ ರಕ್ತ ಒಸರಿದೆ. ಸಂಜೆ ವೇಳೆ ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ನೆಲ್ಲಿಮುಕಲ್ ಜಂಕ್ಷನ್ ನಲ್ಲಿ ಬಸ್ ಇಳಿಯುವಾಗ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಸ್ಸಿನಿಂದ ಕೆಳಗಿಳಿದ ನಂತರ ಬಾಲಕಿ ತಾಯಿಗೆ ಹೇಳಿದ್ದಾಳೆ. ತಾಯಿ ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.
ಮಹಿಳೆ ಎದುರಾದಾಗ ತಾಯಿಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಆಗ ತಾಯಿ ಸರಿಯಾಗಿ ಆತನಿಗೆ ಪಂಚ್ ಕೊಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಏನಾತ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮತ್ತು ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಬಾಲಕಿಯ ತಾಯಿ ಮೇಲೆಯೂ ಹಲ್ಲೆ ಪ್ರಕರಣ ದಾಖಲಾಗಿದೆ.