ದೇಶದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಹಲವು ಪಕ್ಷಗಳಂತೂ ಸೆಲೆಬ್ರಿಟಿಗಳಿಗೆ ಮಣೆ ಹಾಕುತ್ತಿವೆ. ಈ ಸಾಲಿಗೆ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಇದ್ದಾರೆ. ಸದ್ಯ ಈ ಸಾಲಿಗೆ ಹಾಟ್ ಬೆಡಗಿ ಬಂದಿದ್ದಾರೆ.
ಬಾಲಿವುಡ್ ಬೆಡಗಿ ನೇಹಾ ಶರ್ಮಾ ಈಗ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ನೇಹಾ ಸದ್ಯ ಬಿಹಾರದ ಭಾಗಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೂ ಆಗಿರುವ ನೇಹಾ ಅವರ ತಂದೆ ಅಜಯ್ ಶರ್ಮಾ ಮಗಳಿಗಾಗಿ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಭಾಗಲಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದು, ಆ ಕ್ಷೇತ್ರದಿಂದಲೇ ಮಗಳನ್ನು ಸ್ಪರ್ಧಿಸಿ ಗೆಲ್ಲಿಸಬೇಕೆಂದು ತಂದೆ ಅಜಯ್ ಶರ್ಮಾ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಭಾಗಲಪುರ ಕ್ಷೇತ್ರವನ್ನು ಕಾಂಗ್ರೆಸ್ ಗೆ ಉಳಿಸಿಕೊಳ್ಳುವ ಕಸರತ್ತನ್ನು ಅವರು ಮುಂದುವರೆಸಿದ್ದಾರೆ.