ಬೆಂಗಳೂರು: ನಿರಂತರವಾಗಿ ಬ್ಯಾಂಕುಗಳ ವಹಿವಾಟು ನಡೆಸುವವರಿಗೆ ಪ್ರತಿ ತಿಂಗಳು ಬ್ಯಾಂಕುಗಳು ರಜೆ ಇರುವ ಕುರಿತು ಮಾಹಿತಿ ಇರಬೇಕು. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳು ಭಾನುವಾರ ಮತ್ತು ಶನಿವಾರದ ರಜೆಯ ಹೊರತಾಗಿಯೂ ಕೆಲ ದಿನಗಳು ಮುಚ್ಚಿರುತ್ತವೆ. ಅದರಲ್ಲೂ, ಜುಲೈ ತಿಂಗಳಲ್ಲಿ ಬ್ಯಾಂಕುಗಳು 12 ದಿನ ಮುಚ್ಚಿರುತ್ತವೆ. ಯಾವ ದಿನ ಮುಚ್ಚಿರುತ್ತವೆ ಎಂಬುದರ ಕುರಿತ ವಿವರ ಇಲ್ಲಿದೆ ನೋಡಿ.
- ಜುಲೈ 3: ಗುರುವಾರ ಬ್ಯಾಂಕ್ ರಜೆ (ಖಾರ್ಚಿ ಪೂಜೆಯ ನಿಮಿತ್ತ ತ್ರಿಪುರದಲ್ಲಿ ಬ್ಯಾಂಕ್ ಬಂದ್)
- ಜುಲೈ 5: ಶನಿವಾರ ಬ್ಯಾಂಕ್ ರಜೆ (ಗುರು ಹರಗೋಬಿಂದ್ ಜಿ ಜನ್ಮದಿನ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್)
- ಜುಲೈ 06: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ
- ಜುಲೈ 12: ಎರಡನೇ ಶನಿವಾರ ಬ್ಯಾಂಕ್ ರಜೆ
- ಜುಲೈ 13: ಭಾನುವಾರ ದೇಶಾದ್ಯಂತ ಬ್ಯಾಂಕ್ ರಜೆ
- ಜುಲೈ 14: ಸೋಮವಾರ ಬ್ಯಾಂಕ್ ರಜೆ (ಬೆಹ್ ದೀಂಕ್ಲಾಮ್ ಆಚರಣೆ, ಮೇಘಾಲಯದಲ್ಲಿ ಬ್ಯಾಂಕ್ ರಜೆ)
- ಜುಲೈ 16: ಬುಧವಾರ ಬ್ಯಾಂಕ್ ರಜೆ (ಹರೇಲಾ ವೇಳೆ ಉತ್ತರಾಖಂಡದಲ್ಲಿ ಬ್ಯಾಂಕ್ ಬಂದ್)
- ಜುಲೈ 17: ಗುರುವಾರ ಬ್ಯಾಂಕ್ ರಜೆ (ಯು ತಿರೋಟ್ ಅವರ ಪುಣ್ಯತಿಥಿ, ಮೇಘಾಲಯದಲ್ಲಿ ಬ್ಯಾಂಕ್ ರಜೆ)
- ಜುಲೈ 19: ಶನಿವಾರ ಬ್ಯಾಂಕ್ ರಜೆ (ಕೇರ್ ಪೂಜೆ ಪ್ರಯುಕ್ತ ತ್ರಿಪುರದಲ್ಲಿ ಬ್ಯಾಂಕ್ ಬಂದ್)
- ಜುಲೈ 20: ಭಾನುವಾರ ದೇಶಾದ್ಯಂತ ಬ್ಯಾಂಕ್ ಗಳಿಗೆ ವಾರದ ರಜೆ
- ಜುಲೈ 17: ಭಾನುವಾರ ದೇಶಾದ್ಯಂತ ಬ್ಯಾಂಕ್ ಗಳಿಗೆ ಸಾಪ್ತಾಹಿಕ ರಜೆ
- ಜುಲೈ 28: ಸೋಮವಾರ ಬ್ಯಾಂಕ್ ರಜೆ (ಡ್ರುಕ್ಪಾತ್ಶೆ-ಜಿ ಆಚರಣೆ ಸಿಕ್ಕಿಂನಲ್ಲಿ ಬ್ಯಾಂಕ್ ಬಂದ್)