ಚಾಮರಾಜನಗರ: ಐದು ಹುಲಿಗಳ ಹತ್ಯೆ ಅರಣ್ಯಾಧಿಕಾರಿ, ಸಿಬ್ಬಂದಿ ಬೇಜವಾಬ್ದಾರಿಯಿಂದಲೇ ನಡೆದಿದೆ ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರ ಬಂಧನವಾಗಿದೆ. ಕೂಡಲೇ ಅಧಿಕಾರಿ ಬದಲಾಯಿಸುವಂತೆ ಅರಣ್ಯ ಸಚಿವರ ಜೊತೆಗೆ ಮಾತನಾಡುತ್ತೇನೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸರ್ಕಾರಕ್ಕೂ ಹಾಗೂ ತಮಗೆ ಏನೂ ಸಂಬಂಧ ಇಲ್ಲ ಎನ್ನುವಂತೆ ಇರುತ್ತಾರೆ. ಈ ಘಟನೆ ಕುರಿತು ಮಾಹಿತಿ ಪಡೆಯಬೇಕೆಂದರೆ ಎಲ್ಲ ಅಧಿಕಾರಿಗಳು ನಾಟ್ ರೀಚಬಲ್ ಆಗಿದ್ದಾರೆ. ಈ ಘಟನೆಗೆ ಕಾರಣವಾದ ಅಧಿಕಾರಿಯ ವರ್ಗಾವಣೆಗೆ ಸಿಎಂ, ಅರಣ್ಯ ಸಚಿವರಿಗೆ ಮನವಿ ಮಾಡುತ್ತೇನೆ. ಈ ಕೂಡಲೇ ಒಳ್ಳೆಯ ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ಮನವಿ ಮಾಡುತ್ತೇನೆ. ಮೇಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಹುಲಿಗಳ ಸಾವಿನ ವಿಚಾರ ತುಂಬಾ ಬೇಸರ ತಂದಿದೆ. ಕಾಡು ಇದ್ದರೆ ನಾಡು, ನಾವು ಪ್ರಕೃತಿ ವಿರುದ್ಧ ಹೋಗಲು ಆಗಲ್ಲ. ಅಲ್ಲಿನ ಜನರು ಮುಗ್ದರು, ಸುವನ್ನು ತಿಂದ ಕಾರಣಕ್ಕೆ ವಿಷ ಹಾಕಿದ್ದಾರೆ. ವಾಚರ್ ಗಳು ಅವತ್ತು ಬೀಟ್ ಮಾಡಲು ಹೋಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆ ಹಸುವಿನ ಕಳೇಬರ ಬೇರೆ ಕಡೆ ಹಾಕಿದರೆ, ಈ ಹುಲಿಗಳ ಸಾವು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.