ರಾಮನಗರ: ಡಿಕೆಶಿಗೆ ಅವಕಾಶ ಸಿಗಬೇಕು ಎಂದು ಎಚ್.ಸಿ. ಬಾಲಕೃಷ್ಣ ಬ್ಯಾಟಿಂಗ್ ಮಾಡಿದ್ದಾರೆ.
ಮಾಗಡಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನಾನು ಸಿಎಂ ಮಾಡಲು ಆಗಲ್ಲ. ಬೇಡ ಎನ್ನಲೂ ಆಗುವುದಿಲ್ಲ. ಸರ್ಕಾರ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಪ್ರಯತ್ನ ಹೆಚ್ಚಿದೆ. ಹೀಗಾಗಿ ಹೈಕಮಾಂಡ್ ಅವರಿಗೆ ಅವಕಾಶ ನೀಡಬೇಕು. ಹೈಕಮಾಂಡ್ ಗೆ ಎಲ್ಲ ವಿಚಾರ ಗೊತ್ತಿದೆ. ಹೀಗಾಗಿ ಅವರು ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವ ರಾಜಣ್ಣ ಕ್ರಾಂತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹಿರಿಯ ಸಚಿವರಾಗಿ ರಾಜಣ್ಣ ಆ ರೀತಿ ಮಾತನಾಡಬಾರದು. ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಏನಾದರು ಇದ್ದರೆ ಪಕ್ಷದ ವ್ಯಾಪ್ತಿಯಲ್ಲಿ ಮಾತನಾಡಬೇಕು. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಬರಲಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದ್ದಾರೆ.