ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿರಿಮನೆ ಜಲಪಾತ ಮೈದುಂಬಿ ಭೋರ್ಗರೆಯುತ್ತಿದೆ.
ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ ತುಂಬಿ ಹರಿಯುತ್ತಿದ್ದು, ಕಲ್ಲು ಬಂಡೆಗಳ ಮೇಲೆ ಜಲಪಾತದ ಆರ್ಭಟ ಭೋರ್ಗರೆಯುತ್ತಿದೆ. ಘಟ್ಟ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿರಿಮನೆ ಜಲಪಾತ ತುಂಬಿ ಹರಿಯುತ್ತಿರುವುದರಿಂದ ಅದು ಅಪಾಯದ ಮಟ್ಟ ಮೀರಿದೆ. ಹೀಗಾಗಿ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಲಾಗಿದೆ.