ಬೆಂಗಳೂರು: ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಾಳಿ ವೇಳೆ ಸುಮಾರು 30 ಲಕ್ಷ ರೂ.ಗೂ ಅಧಿಕ ಮೌಲ್ಯದ ನಕಲಿ ಬ್ರಾಂಡೆಂಡ್ ಜೀನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಶನಿವಾರ ತಡರಾತ್ರಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು.
ದಾಳಿ ವೇಳೆ ಪೂಮಾ, ನೈಕಿ, ಲೆವಿಸ್, ಪೋಲೋ, ರಾಲ್ಫ್ ಲಾರೆನ್ ಬ್ರಾಂಡ್ ಜೀನ್ಸ್ ನಕಲಿ ತಯಾರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದಾಳಿ ವೇಳೆ ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ.
ಎ.ಎ.ಫ್ಯಾಷನ್ಸ್ ಹೆಸರಿನಲ್ಲಿ ಬ್ರಾಂಡೆಡ್ ಜೀನ್ಸ್ ನಕಲಿ ತಯಾರಿಕೆ ಮಾಡಲಾಗುತ್ತಿತ್ತು. ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಗೋಡೌನ್ ನಲ್ಲಿ ಬ್ರಾಂಡೆಡ್ ಬಟ್ಟೆಗಳ ನಕಲಿ ಪೀಸ್ ತಯಾರಿಕೆ ನಡೆಯುತ್ತಿತ್ತು. ಸದ್ಯ ಈ ಕುರಿತು ಪೊಲೀಸರು ಕಾಫಿರೈಟ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.