ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಬಂಧಿಯಾಗಿರುವ ನಟಿ ರನ್ಯಾ ರಾವ್ ಗೆ ಜೈಲಿನಲ್ಲಿ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿ ಬಂದಿದೆ.
ಈಗ ಜೈಲಿನಲ್ಲಿ ನಟಿ ರನ್ಯಾರಾವ್ (Ranya Rao) ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಜೈಲೂಟ ಎಂದರೆ ನಟಿ ದೂರ ಸರಿಯುತ್ತಿದ್ದರು. ಮನೆ ಊಟಕ್ಕಾಗಿ ಅಂಗಲಾಚುತ್ತಿದ್ದರು. ದಿನ ಕಳೆದಂತೆ ಈಗ ಮನೆಯೂಟಕ್ಕೆ ಸೆಟ್ ಆಗಿದ್ದಾರೆ. ಆದರೆ, ಈಗ ಜೈಲಿನಲ್ಲಿ ರನ್ಯಾ ರಾವ್ ಗೆ ಮಹಿಳಾ ಕೈದಿಗಳಿಂದ ಕಿರುಕುಳವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರನ್ಯಾ ರಾವ್ ಗೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಸಹ ಮಹಿಳಾ ಕೈದಿಗಳಿಂದ ಕಿರುಕುಳ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲಿದ್ದ ಕೈದಿಗಳು ರನ್ಯಾರಾವ್ ಗೆ ಚಿನ್ನ ಕಳ್ಳಿ, ಏನ್ ಸಮಾಚಾರ? ಹೇಗಿದೆ ಜೈಲು ಅಂತಾ ಹೀಯಾಳಿಸಿ ಮಾತನಾಡುತ್ತಿದ್ದಾರೆ ಎಂದು ರನ್ಯಾ ಕಣ್ಣೀರು ಸುರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ರನ್ಯಾ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.