ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ಹಲಸೂರು ಕೆರೆ ಬಳಿ ನಡೆದಿದೆ.
ಶುಕ್ರವಾರ ಬೆಳಗ್ಗೆ 11.30ರ ವೇಳೆಗೆ ಈ ಘಟನೆ ನಡೆದಿದೆ. ಮರಬಿದ್ದ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ಮೇಲೆ ಮರ ಬೀಳುತ್ತಿದ್ದಂತೆ ಚಾಲಕ ಗಾಬರಿಗೊಂಡಿದ್ದಾನೆ.
ಎದುರಿನಿಂದ ಬರುತ್ತಿದ್ದ ಆಟೋ ಚಾಲಕ ಕೂಡ ಆಟೊ ಬಲಕ್ಕೆ ತಿರುಗಿಸಿದ್ದಾನೆ. ಆ ವೇಳೆ ಆಟೋಗೆ ಕಾರು ಡಿಕ್ಕಿ ಹೊಡೆದಿದೆ. ಆದರೆ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.