ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಇಂದು ಚೆನ್ನೈನಲ್ಲಿರುವ ಇಂಟ್ರೆಗಲ್ ಕೋಚ್ ಫ್ಯಾಕ್ಟರಿಗೆ (ICF) ಭೇಟಿ ನೀಡಿದರು.
ಈ ವೇಳೆ ವಂದೇ ಭಾರತ್, ಅಮೃತ್ ಭಾರತ್, ಕೊಲ್ಕತ್ತಾ ಮೆಟ್ರೋ ಕೋಚಸ್ ಹಾಗೂ ಹೈಡ್ರೋಜನ್ ಟ್ರೇನ್ ಸೆಟ್ ಉತ್ಪಾದನೆ ಕಾರ್ಯ ಪರಿವೀಕ್ಷಣೆ ಮಾಡಿದರು.
ಇಂಟ್ರಿಗೆಲ್ ಕೋಚ್ ಫ್ಯಾಕ್ಟರಿಯಲ್ಲಿನ ವಿವಿಧ ಯೋಜನೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಟ್ರೇಡ್ ಯೂನಿಯನ್’ನ ಸಿಬ್ಬಂದಿ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿತ್ವದ ನಾಯಕತ್ವದಲ್ಲಿ ರೈಲ್ವೆ ಇಲಾಖೆಯು ಮೂಲಭೂತ ಸೌಕರ್ಯಗಳ ಹೆಚ್ಚಳದಲ್ಲಿ ಅಭೂತಪೂರ್ವ ಯಶಸ್ಸು ಕಾಣುತ್ತಿದೆ ಎಂದು ನೂತನ ರೈಲ್ವೆ ಕಾಮಗಾರಿಗಳ ಕುರಿತು ಮಾಹಿತಿ ಹಂಚಿಕೊಂಡರು.