ಕಾರವಾರ: ತಂದೆಯ ನಿರ್ಲಕ್ಷ್ಯದಿಂದಾಗಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೊಬ್ಬರದ ಗುಂಡಿಗೆ (Manure Pit) ಬಿದ್ದು ಮಗು ಸಾವನ್ನಪ್ಪಿದೆ. ಈ ಘಠನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೊಂಗ್ರಿ ಹತ್ತಿರದ ಹಳವಳ್ಳಿ ಎಂಬಲ್ಲಿ ನಡೆದಿದೆ.
ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2) ಸಾವನ್ನಪ್ಪಿದ ದುರ್ದೈವ ಮಗು. ಶ್ರೀಕಾಂತ್ ಹೆಬ್ಬಾರ್ ದನದ ಕೊಟ್ಟಿಗೆ ಕೆಲಸಕ್ಕಾಗಿ ಕೊಟ್ಟಿಗೆಗೆ ತೆರಳಿದ್ದರು. ಆಗ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಮಗು ಆಟವಾಡುತ್ತ ಗೊಬ್ಬರದ ಗುಂಡಿಗೆ ಬಿದ್ದಿದೆ. ಆದರೆ, ಇದನ್ನು ತಂದೆ ಗಮನಿಸಿಲ್ಲ. ಆನಂತರ ಹುಡುಕಾಡಿದಾಗ ಮಗು ಗುಂಡಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.